ವಿಟ್ಲ: ಡಿ ಗ್ರೂಫ್ ವತಿಯಿಂದ ಶಾಕೀರ್ ಅಳಕೆಮಜಲು ಮತ್ತು ಸಮದ್ ಏರ್ ಸೌಂಡ್ಸ್ ಗೆ ಸನ್ಮಾನ

ವಿಟ್ಲ: ಡಿ ಗ್ರೂಫ್ ಇದರ ಮಹಾಸಭೆ ಸಂದರ್ಭ ಸಂಸ್ಥೆಯ ವತಿಯಿಂದ ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಯಾಗಿ ಆಯ್ಕೆಯಾದ ಶಾಕೀರ್ ಅಳಕೆಮಜಲು ಮತ್ತು ವಿಟ್ಲ-ಉಪ್ಪಿನಂಗಡಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡ ಅಬ್ದುಲ್ ಸಮದ್ ಅವರನ್ನು ಸನ್ಮಾನಿಸಲಾಯಿತು.
ಡಿ ಗ್ರೂಪ್ ನ ಪದಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು. ಶಾಕೀರ್ ಅಳಕೆಮಜಲು ಅವರು ಡಿ ಗ್ರೂಪ್ ನ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಸಮದ್ ಅವರು ಡಿ ಗ್ರೂಪ್ ನ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಇವರು ಇಬ್ಬರನ್ನು ಡಿ ಗ್ರೂಪ್ ಎಲ್ಲರೂ ಜತೆ ಸೇರಿ ಸನ್ಮಾನಿಸಿದರು.