ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಕೊಂದು, ಪತಿ ಆತ್ಮಹತ್ಯೆ
ಬೆಂಗಳೂರು: ಮಹಾಶಿವರಾತ್ರಿ ದಿನದಂದೇ ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಕೊಂದು, ಪತಿ ನೇಣಿಗೆ ಶರಣಾಗಿರುವ ಘಟನೆ ತಿಗಳರಪಾಳ್ಯ ಮುಖ್ಯ ರಸ್ತೆಯ ನ್ಯೂ ಇಂಡಿಯನ್ ಸ್ಕೂಲ್ ಬಳಿ ಘಟನೆ ನಡೆದಿದೆ.
ಪತಿ ಸುರೇಶ್ (40), ಪತ್ನಿ ಮಮತಾ (33) ಮೃತ ದಂಪತಿ. ಪತ್ನಿಯ ಕುತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಸುರೇಶ್, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.





