December 15, 2025

ಇಬ್ರಾಹಿಂ ಜದ್ರಾನ್ ಸ್ಫೋಟಕ ಶತಕ: ಅಫ್ಘಾನಿಸ್ತಾನಕ್ಕೆ 8 ರನ್‌ಗಳ ರೋಚಕ ಜಯ: ಟೂರ್ನಿಯಿಂದ ಇಂಗ್ಲೆಂಡ್‌ ಔಟ್

0
image_editor_output_image-613432325-1740602446601.jpg

ಲಾಹೋರ್‌: ಇಬ್ರಾಹಿಂ ಜದ್ರಾನ್ ಅವರ ಸ್ಫೋಟಕ ಶತಕ, ಕೊನೆಯಲ್ಲಿ ಬೌಲರ್‌ಗಳ ಬಿಗಿಯಾದ ಬೌಲಿಂಗ್‌ನಿಂದ ಇಂಗ್ಲೆಂಡ್‌ ವಿರುದ್ಧ ಅಫ್ಘಾನಿಸ್ತಾನ 8 ರನ್‌ಗಳ ರೋಚಕ ಜಯ ಸಾಧಿಸಿದೆ. ರೋಚಕ ಕಾದಾಟದಲ್ಲಿ ಸೋತ ಇಂಗ್ಲೆಂಡ್‌ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಿಂದ ನಿರ್ಗಮಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 7 ವಿಕೆಟ್‌ ನಷ್ಟಕ್ಕೆ 325 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಕೊನೆಯವರೆಗೂ ಜಯಗಳಿಸಲು ಹೋರಾಡಿತು. ಅಂತಿಮವಾಗಿ 49.5 ಓವರ್‌ಗಳಲ್ಲಿ 317 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲೊಪ್ಪಿಕೊಂಡಿತು.

Leave a Reply

Your email address will not be published. Required fields are marked *

error: Content is protected !!