ಸುಡಾನ್: ಜನವಸತಿ ಪ್ರದೇಶದಲ್ಲಿ ಮಿಲಿಟರಿ ವಿಮಾನ ಪತನ: 46 ಮಂದಿ ಮೃತ್ಯು

ಸುಡಾನ್: ಮಿಲಿಟರಿ ವಿಮಾನವೊಂದು ಮಂಗಳವಾರ ತಡರಾತ್ರಿ ಜನವಸತಿ ಪ್ರದೇಶದಲ್ಲಿ ಪತನವಾದ ಪರಿಣಾಮ 46 ಮಂದಿ ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ಎಎಫ್ಸಿ ವರದಿ ಮಾಡಿದೆ.
ಮೃತರ ಸಂಖ್ಯೆ 46ಕ್ಕೆ ಏರಿಕೆಯಾಗಿದ್ದು, 10 ಮಂದಿ ಗಂಭೀರ ಗಾಯಗಳಾಗಿವೆ ಎಂದು ಖರ್ತೂಮ್ ಪ್ರಾದೇಶಿಕ ಸರ್ಕಾರದ ಮಾಧ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ವರದಿ ಉಲ್ಲೇಖಿಸಿದೆ.
ʼಆಂಟೊನೊವ್ʼ ವಿಮಾನ ಮಂಗಳವಾರ ವಾಡಿ ಸೈದ್ನಾ ವಾಯುನೆಲೆಯಿಂದ ಟೇಕ್ ಆಫ್ ಮಾಡಲು ಪ್ರಯತ್ನಿಸುತ್ತಿದ್ದಾಗ ಪತನಗೊಂಡಿದೆ. ಈ ವಾಯುನೆಲೆಯು ಒಮ್ದುರ್ಮನ್‌ನ ಉತ್ತರಕ್ಕೆ ಇದೆ ಎಂದು ಸುಡಾನ್‌ನ ಮಿಲಿಟರಿ ಮಾಹಿತಿ ನೀಡಿದೆ. ವಿಮಾನ ಪತನದ ವೇಳೆ ಹಲವು ಮನೆಗಳಿಗೂ ಹಾನಿಯಾಗಿದೆ.
ವಿಮಾನ ಟೇಕ್‌ಆಫ್ ಸಮಯದಲ್ಲಿ ಪತನಗೊಂಡಿತು ಮತ್ತು ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರ ಪ್ರಾಣ ಹಾನಿಗೆ ಕಾರಣವಾಗಿದೆ ಎಂದು ಸುಡಾನ್ ಪ್ರಾದೇಶಿಕ ಸರಕಾರ ತಿಳಿಸಿದೆ.