ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

ಸರಳಿಕಟ್ಟೆ: ಯೇನಪೋಯ ವಿಶ್ವವಿದ್ಯಾಲಯ ವತಿಯಿಂದ 2024-25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಶಿಬಿರದ ಉದ್ಘಾಟನೆಯನ್ನು ಶ್ರೀಯುತ ಅವಿನಾಶ್ ಎಚ್ ಗೌಡ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉಪ್ಪಿನಂಗಡಿ ಇವರು ಜ್ಯೋತಿಯನ್ನು ಬೆಳಗುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು. ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವನ್ನು ಎನ್ ಎಸ್ ಎಸ್ ಶಿಬಿರದ ಸಂಯೋಜಕರಾದ ಶ್ರೀಯುತ ಅಬ್ದುಲ್ ರಶೀದ್ ರವರು ಗಣ್ಯರನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಿತ ನುಡಿಗಳನ್ನು ವ್ಯಕ್ತಪಡಿಸಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಯುತ ದಯಾನಂದ್ ರವರು ಅಧ್ಯಕ್ಷೀಯ ನುಡಿಗಳನ್ನು ಮಾತನಾಡುವ ಮೂಲಕ ಶಿಬಿರಾರ್ಥಿಗಳಿಗೆ ಸ್ವಾಗತ ಹಾಗೂ ಶುಭವನ್ನು ಕೋರಿದರು.
ಶ್ರೀಯುತ ಶಾಕೀರ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು. ಶಿಕ್ಷಕರಾದ ಸುನಿಲ್ ಕುಮಾರ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಅಭಿಷೇಕ್ ಆರ್.ಎನ್. ಸಹಕರಿಸಿದರು, ಮೂಲಕ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ನಿರ್ವಿಘ್ನವಾಗಿ ನಡೆಯುವುದರೊಂದಿಗೆ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಶ್ರೀಯುತ ದಯಾನಂದ್, ಅವಿನಾಶ್ ಎಚ್ ಗೌಡ, ಎಂ.ಜಿ.ಅಬೂಬಕರ್ ಪುತ್ತು, ಶ್ರೀಮತಿ ಅನುರಾಧ ಪಿ ಆರ್, ಶ್ರೀಯುತ ಸುಬ್ರಮಣ್ಯ ರಾವ್, ಶ್ರೀಯುತ ಇನಾಸ್ ರೋಡ್ರಿಗಾಸ್, ಶ್ರೀಯುತ ಅಬ್ಬಾಸ್ ಮಡಿಕೇರಿ ಬೆಟ್ಟು,ಅಬ್ದುಲ್ ಹಕೀಂ ತನಲ್, ಶ್ರೀ ಅನ್ವರ್, ಶ್ರೀಯುತ ನೌಮಾನ್, ಶ್ರೀಮತಿ ಜುಬೈದ ವಕೀಲರು, ಶ್ರೀಮತಿ ಸಫೀನ, ಶ್ರೀಯುತ ಮಹಮ್ಮದ್ ಕೈಸ್, ಕುಮಾರಿ ಫಿಲ್ಮಿ ಮೆಹಬೂಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.