ಕಂದಕಕ್ಕೆ ಉರುಳಿ ಬಿದ್ದ KSRTC ಬಸ್: 25 ಮಂದಿಗೆ ಗಾಯ

ಚಿಕ್ಕೋಡಿ: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ಕಂದಕಕ್ಕೆ ಉರುಳಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮೀರಜ್ ತಾಲೂಕಿನ ಮೈಶಾಳ ಗ್ರಾಮದಲ್ಲಿ ನಡೆದಿದೆ.
ಕರ್ನಾಟಕದ ಕಾಗವಾಡ ತಾಲೂಕಿನ ಗಡಿಯಲ್ಲಿರುವ ಮೈಶಾಳ ಗ್ರಾಮದಲ್ಲಿ ಮೀರಜ್‌ನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿ 25 ರಿಂದ 30 ಅಡಿ ಕಂದಕಕ್ಕೆ ಉರುಳಿದೆ. ಇದನ್ನೂ ಓದಿ: ದಲಿತ ಸಮಾವೇಶ ಮಾಡಬೇಡಿ ಅಂತ ಹೈಕಮಾಂಡ್ ಹೇಳಿಲ್ಲ: ಮುನಿಯಪ್ಪ
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 40 ಜನರಲ್ಲಿ 25 ಜನರಿಗೆ ಗಾಯಗಳಾಗಿವೆ. ಬಸ್‌ನಲ್ಲಿ ಸಿಲುಕಿದ್ದವರನ್ನ ಸ್ಥಳೀಯರು ಹೊರತೆಗೆದಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.