ಉಡುಪಿ: ವಾದ್ಯ ಕಲಾವಿದ ಅಶ್ವಥ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ

ಉಡುಪಿ: ಸಂಗೀತ ವಾದ್ಯ ಕಲಾವಿದರೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೈಲಕೆರೆಯಲ್ಲಿ ನಡೆದಿದೆ.
ಮೃತರನ್ನು ಬೈಲಕೆರೆಯ ರಾಮಕೃಷ್ಣ ದೇವಾಡಿಗ ಅವರ ಪುತ್ರ ಸಂಗೀತ ಕಲಾವಿದ ಅಶ್ವಥ್ (32) ಎಂದು ಗುರುತಿಸಲಾಗಿದೆ.
ಮನೆಯ ಕೊಣೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.ವಿಷಯ ತಿಳಿದ ಸಮಾಜಸೇವಕ ನಿತ್ಯಾನಂದ ವಳಕಾಡು ವ್ಯಕ್ತಿಯನ್ನು ನೇಣಿನಿಂದ ಕೆಳಗಿಳಿಸಿ ಸುನೀಲ್ ಬೈಲಕೆರೆ ಅವರ ನೆರವಿನಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದೊಯ್ದರು.
ಪರೀಕ್ಷೆ ಬಳಿಕ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.