ಸುರಿಬೈಲಿಯನ್ಸ್ ಕೂಟಾಯಿಮ ವತಿಯಿಂದ ಅದ್ದೂರಿಯ ಮೀಟ್ & ಟ್ರೀಟ್ ಕಾರ್ಯಕ್ರಮ

ಯುಎಇ: ಸುರಿಬೈಲಿಯನ್ಸ್ ಕೂಟಾಯಿಮ ಯುಎಇ ರಾಷ್ಟ್ರೀಯ ಇದರ ಆಶ್ರಯದಲ್ಲಿ ದಿನಾಂಕ 16-02-2025 ಆದಿತ್ಯವಾರದಂದು ದುಬೈಯ ಮುಶ್ರಿಫ್ ಪಾರ್ಕ್ ನಲ್ಲಿ ಸುರಿಬೈಲಿಯನ್ಸ್ ಕೂಟಾಯಿಮ “ಟ್ರೀಟ್ & ಮೀಟ್” ಸ್ನೇಹಕೂಟ ನಡೆಯಿತು.
ಯುಎಇ ಯಲ್ಲಿ ನೆಲೆಸಿರುವ ಸುರಿಬೈಲ್ ಆಸುಪಾಸಿನ ನೂರಕ್ಕೂ ಹೆಚ್ಚಿನ ಯುವಕರು ಸ್ನೇಹಕೂಟದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡರು.
ಸಮಾರಂಭದಲ್ಲಿ ಮುಖ್ಯ 3 ಗಣ್ಯ ಸಾಧಕರಾದ, ಅಬೂಬಕ್ಕರ್ ಬಾಲಾಜಿಬೈಲ್, ಸಿರಾಜುದ್ದೀನ್ ಮುಸ್ಲಿಯಾರ್, ರಶೀದ್ ಹನೀಫೀ ಉಸ್ತಾದರನ್ನು ಕಾರ್ಯಕ್ರಮದ ಚೆಯರ್ಮಾನ್ ಹಮೀದ್ ಕುಲ್ಯಾರ್ ಮತ್ತು ಕನ್ವೀನರ್ ತೌಸಿಫ್ ಕೈಯೂರ್ ಮತ್ತು ಇತರ ಸಂಗಡಿಗರೊಂದಿಗೆ ಸೇರಿ ಸನ್ಮಾನಿಸಿ ಗೌರವಿಸಲಾಯಿತು.
ಸಂಜೆಯ ನಂತರ ನಡೆದ ಹಲವು ಕ್ರೀಡಾಕೂಟದಲ್ಲಿ ಮುಖ್ಯ ಅಥಿತಿಯಾಗಿ ಸಯ್ಯಿದ್ ಜಮಲುಲ್ಲೈಲ್ ತಂಙಳ್ ಆಗಮಿಸಿದ್ದರು ಮತ್ತು ಯುವಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದುದ್ದಕ್ಕೂ ಹಲವು ಬಗೆಯ ಆಹಾರ ಅಲ್ಲೇ ತಯಾರಿಸಿ ಒಟ್ಟಾಗಿ ಸವಿದು ಕಾರ್ಯಕ್ರಮದಲ್ಲಿ ಮನ ರಂಜಿಸಿದರು.