ಚಿಕ್ಕಮಗಳೂರು: ಫಾಲ್ಸ್ ಗೆ ಬಿದ್ದು ಕಾಲೇಜು ವಿದ್ಯಾರ್ಥಿ ಮೃತ್ಯು

ಚಿಕ್ಕಮಗಳೂರು: ಕಾಮೇನಹಳ್ಳಿ ಫಾಲ್ಸ್ ಗೆ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದ್ದು, ಚಿಕ್ಕಮಗಳೂರು ಸರಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಚೇತನ್ (18) ಮೃತಪಟ್ಟ ವಿದ್ಯಾರ್ಥಿ ಎನ್ನಲಾಗಿದೆ.
ಶಿಕ್ಷಕರ ಗೈರು ಹಿನ್ನೆಲೆಯಲ್ಲಿ ತರಗತಿಗೆ ರಜೆ ಇದ್ದ ಕಾರಣ ಚೇತನ್ ಸ್ನೇಹಿತರ ಜೊತೆ ಕಾಮೇನಹಳ್ಳಿ ಫಾಲ್ಸ್ ಗೆ ತೆರಳಿದ್ದರು. ಅಲ್ಲಿ ಕಲ್ಲು ಬಂಡೆಯ ಮೇಲಿನಿಂದ ನೀರಿಗೆ ಜಿಗಿದಿದ ಚೇತನ್ ರ ಬಂಡೆ ಕಲ್ಲಿಗೆ ಬಡಿದ ಪರಿಣಾಮ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.