ಮದ್ಯಪಾನ ಮಾಡಲು ಹಣ ಕೊಡದಿದ್ದಕ್ಕೆ ಅಜ್ಜಿಯ ಕೊಲೆ: ಆರೋಪಿಯ ಬಂಧನ
ಚಿತ್ರದುರ್ಗ: ಮದ್ಯಪಾನ ಮಾಡಲು ಹಣ ಕೊಡದಿದ್ದಕ್ಕೆ ಅಜ್ಜಿಯನ್ನೇ ಕೊಲೆ ಮಾಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮೃತ ವೃದ್ಧೆಯನ್ನು ಲಕ್ಷ್ಮಮ್ಮ (70) ಎಂದು ಗುರುತಿಸಲಾಗಿದೆ. ಮೃತ ಅಜ್ಜಿಯ ಓರ್ವ ಮಗ ಶ್ರೀನಿವಾಸ ಬೆಂಗಳೂರಿನಲ್ಲಿ ವಾಸವಾಗಿದ್ದರು. ತನ್ನ ತಾಯಿಗೆ ಆಸರೆಯಾಗಿರಲೆಂದು ಸಂಬಂಧಿಯಾದ ಸಂಜೀವ ರೆಡ್ಡಿ ಎಂಬಾತನನ್ನು ಮನೆಯಲ್ಲಿರುವಂತೆ ಹೇಳಿದ್ದನು. ಹೀಗಾಗಿ ಕಳೆದ ಒಂದು ತಿಂಗಳಿಂದ ಅಜ್ಜಿ ಮಾಡಿಟ್ಟ ಊಟ ಸವಿಯುತ್ತಿದ್ದ ಆಸಾಮಿ, ತನ್ನಲ್ಲಿದ್ದ ಹಣವೆಲ್ಲಾ ಖಾಲಿಯಾದ ಬಳಿಕ ಮದ್ಯಪಾನ ಮಾಡಲು ಹಣ ನೀಡುವಂತೆ ಅಜ್ಜಿಗೆ ದುಂಬಾಲು ಬಿದ್ದಿದ್ದನು.





