ಸಹೋದರಿಯ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಹಾರ್ಟ್ ಅಟ್ಯಾಕ್: 23 ವರ್ಷದ ಯುವತಿ ಸಾವು
ಮಧ್ಯಪ್ರದೇಶ: ಸಹೋದರಿಯ ವಿವಾಹ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಯುವತಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನಪ್ಪಿದ ಘಟನೆ ವಿದಿಶಾ ನಗರದಲ್ಲಿ ನಡೆದಿದೆ.
ಮೃತರನ್ನು ಇಂದೋರ್ ನಿವಾಸಿ 23 ವರ್ಷದ ಪರಿಣಿತಾ ಜೈನ್ ಎಂದು ಗುರುತಿಸಲಾಗಿದೆ. ಇವರು ಫೆಬ್ರವರಿ 8 ರಂದು ತಮ್ಮ ಸೋದರ ಸಂಬಂಧಿ ಸಹೋದರಿಯ ಮದುವೆಯ ಸಂಗೀತ್ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ.




