November 27, 2026

ಕುರುಕಲು ತಿಂಡಿ ಪ್ಯಾಕೇಟ್ನಲ್ಲಿದ್ದ ಆಟಿಕೆ ನುಂಗಿ ಮಗು ಮೃತ್ಯು

c2410eb6-33ef-4ba6-9ee1-1e95c779eabf

ದಾವಣಗೆರೆ: ಕುರುಕಲು ತಿಂಡಿ ಪೊಟ್ಟಣದಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಮಗು ಸಾವನ್ನಪ್ಪಿದ ಘಟನೆ ಚನ್ನಗಿರಿ ಪಟ್ಟಣದ ಕೌಸರ್ ಮಸೀದಿ ಏರಿಯಾದಲ್ಲಿ ನಡೆದಿದೆ.

ಅಲಿಯಾ ಶೇಕ್ (4 ವರ್ಷ, 4 ತಿಂಗಳು) ಸಾವನ್ನಪ್ಪಿದ ಮಗು. ಮನೆಯ ಪಕ್ಕದಲ್ಲೇ ಇದ್ದ ಅಂಗಡಿಯಿಂದ ಮಗು ಕುರುಕಲು ತಿಂಡಿ ತಂದು ತಿನ್ನುತ್ತಿತ್ತು. ಈ ವೇಳೆ ಅದರಲ್ಲಿದ್ದ ಆಟಿಕೆಯನ್ನು ನುಂಗಿ, ಮಗು ಅಸ್ವಸ್ಥಗೊಂಡಿತ್ತು.

ಕೂಡಲೇ ಮಗುವನ್ನು ಪೋಷಕರು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಪಡೆದು ಮನೆಗೆ ಕರೆತಂದ ತಕ್ಷಣ ಅಸ್ವಸ್ಥಗೊಂಡು ಮಗು ಸಾವನ್ನಪ್ಪಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

error: Content is protected !!