ಕಾಸರಗೋಡು: ರೈಲಿಗೆ ಕಲ್ಲೆಸೆದ ಪ್ರಕರಣ: ಬೇಕಲ್ ಬೀಚ್ ನ ಇಬ್ಬರು ಕಾರ್ಮಿಕರ ಬಂಧನ
ಕಾಸರಗೋಡು: ರೈಲಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಬೇಕಲ ಬೀಚ್ ನ ಕಾರ್ಮಿಕರನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಮವ್ವಾರ್ ನ ಸುಂದರ (49) ಮತ್ತು ಮುರ್ಷಿದಾಬಾದ್ ನ ರೋಶನ್ ರಾಯ್ (19) ಬಂಧಿತ ಆರೋಪಿಗಳು.
ಮಂಗಳವಾರ ಮಧ್ಯಾಹ್ನ 2.45 ರ ಸುಮಾರಿಗೆ ಮಂಗಳೂರು ಚೆನ್ನೈ ಎಕ್ಸ್ ಪ್ರೆಸ್ ರೈಲಿಗೆ ಬೇಕಲ ಸಮೀಪ ಕಲ್ಲೆಸೆದಿದ್ದು, ಪ್ರಯಾಣಿಕರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದರು.




