March 19, 2026

ಬೈಕ್‌ಗೆ ಹಿಂಬದಿಯಿಂದ ಸರ್ಕಾರಿ ಬಸ್ ಢಿಕ್ಕಿ: ಒಂದೇ ಕುಟುಂಬದ ಐವರು ಸಾವು

0
image_editor_output_image2012407409-1738762965235.jpg

ಯಾದಗಿರಿ: ಬೈಕ್‌ಗೆ ಹಿಂಬದಿಯಿಂದ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಕಮಾನ್ ಬಳಿ ನಡೆದಿದೆ.

ಮೃತರನ್ನು ಶಹಾಪುರದ ಹಳಿಸಗರ ನಿವಾಸಿಗಳಾದ ಪತಿ ಆಂಜನೇಯ (35), ಪತ್ನಿ ಗಂಗಮ್ಮ (28), ಮಕ್ಕಳಾದ ಪವಿತ್ರ (5) ರಾಯಪ್ಪ (3) ಹಾಗೂ ಆಂಜನೇಯನ ಸಹೋದರನ ಮಗ ಹನುಮಂತ (1) ಎಂದು ಗುರುತಿಸಲಾಗಿದೆ.

ಮೃತ ಆಂಜನೇಯ ತನ್ನ ತಾಯಿ ಹಾಗೂ ಮಕ್ಕಳನ್ನು ಕರೆದುಕೊಂಡು ಒಂದೇ ಬೈಕ್‌ನಲ್ಲಿ ಸುರಪುರದಿಂದ ತಿಂಥಣಿ ಕಡೆಗೆ ಹೊರಟ್ಟಿದ್ದರು. ಈ ವೇಳೆ ಸರ್ಕಾರಿ ಬಸ್ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಇನ್ನುಳಿದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!