ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ಸೇರಿದ ಜಮೀನಿನಲ್ಲಿದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಮನೆ ನೆಲಸಮ

ಪುತ್ತೂರು: ಶ್ರೀ ದೇಗುಲದ ಪುಷ್ಕರಣಿ ಬಳಿ ಕಳೆದ ಕೆಲವು ದಿನಗಳಿಂದ ದೇಗುಲದ ವತಿಯಿಂದ ಅಲ್ಲಿ ಬಾಡಿಗೆಗಿದ್ದ ಮನೆಗಳ ತೆರವು ಕಾರ್ಯಾಚರಣೆ ನಡೆದಿತ್ತು. ಇಬ್ಬರು ಮನೆ ಮಾಲೀಕರನ್ನು ಹೊರತುಪಡಿಸಿ ಉಳಿದವರು ಮನೆ ತೆರವಿಗೆ ಸ್ವ ಇಚ್ಚೆಯಿಂದ ಒಪ್ಪಿಗೆ ಸೂಚಿಸಿದ್ದರು. ಉಜಿರೆ ನಿವಾಸಿ ವಕೀಲರೊಬ್ಬರಿಗೆ ಸೇರಿದ ಮನೆಗೆ ಹಾಗೂ ರಾಜೇಶ್ ಬನ್ನೂರುಗೆ ಸೇರಿದ ಕಟ್ಟಡ ತೆರವಿಗೆ ಒಪ್ಪಿಗೆ ಸಿಕ್ಕಿರಲಿಲ್ಲ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಅಭಿವೃದ್ದಿ ಕಾರ್ಯಕ್ಕೆ ಅಡ್ಡಿಯಾಗಿದ್ದ, ದೇಗುಲದ ಒಡೆತನದ ಜಮೀನಿನಲ್ಲಿದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರಿಗೆ ಸೇರಿದ ಮನೆಯೂ ನೆಲಸಮವಾಗಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ನೆಲಸಮಗೊಳಿಸಿದ್ದು ಯಾರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ.