ಟಾಯ್ಲೆಟ್ ನೆಕ್ಕಿಸಿ ರ‍್ಯಾಗಿಂಗ್: 15 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

ಕೊಚ್ಚಿ ಜನವರಿ 02: ರ‍್ಯಾಗಿಂಗ್ ಗೆ ಇದೀಗ 15 ವರ್ಷದ ಬಾಲಕನೊಬ್ಬ ಜೀವ ಕಳೆದುಕೊಂಡಿದ್ದಾನೆ.
ಎರಡು ವಾರಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ 15 ವರ್ಷದ ವಿಧ್ಯಾರ್ಥಿ ಸಾವಿಗೂ ಮುಂಚೆ ಆತ ಅನುಭವಿಸಿದ್ದ ನರಕಯಾತನೆಯನ್ನು ಆತನ ತಾಯಿ ಇದೀಗ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸದ್ಯ ಇಡೀ ಕೇರಳವೇ #JusticeforMihir ಎನ್ನುವ ಕೂಗಿನೊಂದಿಗೆ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಮಿಹಿರ್ ಜನವರಿ 15 ರಂದು ಶಾಲೆಯಿಂದ ಮರಳಿದ ಕೇವಲ ಒಂದು ಗಂಟೆಯ ನಂತರ ಕೊಚ್ಚಿಯ ತ್ರಿಪುಣಿತರಾದಲ್ಲಿನ ತಮ್ಮ 26 ನೇ ಮಹಡಿಯ ಫ್ಲಾಟ್‌ನಿಂದ ಜಿಗಿದ ಆತ್ಮಹತ್ಯೆ ಮಾಡಿಕೊಂಡಿದ್ದ.
ಎರ್ನಾಕುಲಂನ ತ್ರಿಪ್ಪುನಿಥುರಾದಲ್ಲಿರುವ ಸಿಬಿಎಸ್‌ಇ ಶಾಲೆಯಾದ ಗ್ಲೋಬಲ್ ಪಬ್ಲಿಕ್ ಸ್ಕೂಲ್‌ನಲ್ಲಿ9ನೇ ತರಗತಿ ಕಲಿಯುತ್ತಿದ್ದ ಮಿಹಿರ್ . ಮೇಲೆ ಆತನ ಸಹಪಾಠಿ ವಿಧ್ಯಾರ್ಥಿಗಳು ರಾಗಿಂಗ್ ಮಾಡಿದ್ದಾರೆ.
ರ‍್ಯಾಗಿಂಗ್ ಯಾವ ಮಟ್ಟಕ್ಕೆ ಇತ್ತು ಎಂದರೆ ಅವನ ಸಹಪಾಠಿಗಳು ಅವನ ಮೈಬಣ್ಣದ ಮೇಲೆ ಅವನನ್ನು ಅಪಹಾಸ್ಯ ಮಾಡಿದರು ಮತ್ತು ಅವನನ್ನು ಟಾಯ್ಲೆಟ್ ನೆಕ್ಕಿಸಿದ್ದಾರೆ. ಅವನ ಮುಖವನ್ನು ಕಮೋಡ್ ಒಳಗೆ ಹಾಕಿದ್ದಾರೆ. ಅಲ್ಲದೆ ಆತ ಆತ್ಮಹತ್ಯೆ ಮಾಡಿಕೊಂಡ ಬಳಿಕವೂ ಕೂಡ ಅದನ್ನು ಸಂಭ್ರಮಿಸಿದ್ದಾರೆ.