ವಿಲ್ಸನ್ಸ್ ಡಿಸೀಸ್ ನಿಂದ ಬಳಲುತ್ತಿದ್ದ ನಟಿ ನಿಕಿತಾ ಮೃತ್ಯು

ಕೊಚ್ಚಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಾಲನಟಿಯಾಗಿ ನಟಿಸಿ ಪ್ರಸಿದ್ಧಿಯಾಗಿದ್ದ ನಟಿ ನಿಕಿತಾ ನಯ್ಯರ್ದ ಅವರು ನಿಧನರಾಗಿದ್ದಾರೆ.
ಅತಿ ಚಿಕ್ಕ ವಯಸ್ಸಿಗೆ ಹಲವು ಸಾಧನೆಗಳನ್ನು ಮಾಡಿದ್ದ ನಟಿ ಇದೀಗ ಅತೀ ವಿರಳಾತಿವಿರಳ ಕಾಯಿಲೆಯಿಂದ ಬಳಲುತ್ತಿದ್ದರು. ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರೂ, ಗುಣಮುಖರಾಗದೇ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ.
ಸೇಂಟ್ ತೆರೆಸಾಸ್ ಕಾಲೇಜಿನ ಮಾಜಿ ಅಧ್ಯಕ್ಷೆ ನಿಕಿತಾ ನಯ್ಯಾರ್ (21) ನಿಧನರಾಗಿದ್ದಾರೆ. ಬಿ.ಎಸ್ಸಿ ಸೈಕಾಲಜಿ ವಿದ್ಯಾರ್ಥಿನಿಯಾಗಿದ್ದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕೊಲ್ಲಂ ಕರುನಾಗಪಳ್ಳಿ ಮೂಲದ ನಿಕಿತಾ, ಶಾಫಿ ನಿರ್ದೇಶನದ ಮೇರಿಕುಂಡೊರು ಕುಂಞಾಡು ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು. ವಿಲ್ಸನ್ಸ್ ಡಿಸೀಸ್ ನಿಂದ ಬಳಲುತ್ತಿದ್ದ ಅವರಿಗೆ ಎರಡು ಬಾರಿ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಎರಡನೇ ಶಸ್ತ್ರಚಿಕಿತ್ಸೆಯಾದ ವಾರದಲ್ಲೇ ಅವರು ಕೊನೆಯುಸಿರೆಳೆದರು.
ತಾಯಿ: ನಮಿತಾ ಮಾಧವನ್ ಕುಟ್ಟಿ (ಕಪ್ಪಾ ಟಿವಿ). ತಂದೆ: ಡೋನಿ ಥಾಮಸ್ (ಯುಎಸ್ಎ). ಸೋಮವಾರ ಬೆಳಿಗ್ಗೆ ಎಂಟರಿಂದ ಇಡಪಳ್ಳಿ ನೇತಾಜಿ ನಗರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನ ನಡೆಯಲಿದೆ. ಬಳಿಕ ಕೊಚ್ಚಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.