ಕುಂದಾಪುರ: ಖೋಟಾ ನೋಟು ಚಲಾವಣೆ ಪ್ರಕರಣಕ, 25 ವರ್ಷಗಳಿಂದ ತಲೆಮರೆಸಿದ್ದ ಆರೋಪಿಯ ಬಂಧನ
ಕುಂದಾಪುರ: ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮಹಾರಾಷ್ಟ್ರದ ನಿವಾಸಿ ಮೊಹಮ್ಮದ್ ಹನೀಫ್ ಎಂಬಾತನನ್ನು 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜನವರಿ 28ರಂದು ಕಾಸರಗೋಡಿನಲ್ಲಿ ಬಂಧಿಸಲಾಗಿದೆ.
ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಪರಿಣಾಮವಾಗಿ, ನ್ಯಾಯಾಲಯವು ಅವರ ವಿರುದ್ಧ LPC ವಾರಂಟ್ ಹೊರಡಿಸಿತು.
ಜನವರಿ 28 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ನೂತನ್ ಡಿ, ಸಿಬ್ಬಂದಿಗಳಾದ ಹೆಚ್.ಸಿ.ರಾಜು ಮತ್ತು ಹೆಚ್.ಸಿ ಅಶೋಕ್ ಶೆಟ್ಟಿ ಅವರು ಮೊಹಮ್ಮದ್ ಹನೀಫ್ ಅವರನ್ನು ಕೇರಳದ ಕಾಸರಗೋಡಿನಲ್ಲಿ ಯಶಸ್ವಿಯಾಗಿ ಪತ್ತೆಹಚ್ಚಿ ಬಂಧಿಸಿದ್ದರು.ಮುಂದಿನ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.





