ಶಿವಮೊಗ್ಗ: ಸೂಕ್ತ ಚಿಕಿತ್ಸೆ ಸಿಗದೇ ಒಂದೂವರೆ ತಿಂಗಳ ಗರ್ಭಿಣಿ ಸಾವು

ಶಿವಮೊಗ್ಗ: ಸರಿಯಾದ ಚಿಕಿತ್ಸೆ ಸಿಗದೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಒಂದೂವರೆ ತಿಂಗಳ ಗರ್ಭಿಣಿ ಸಾವನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತರನ್ನು ಹೊಸನಗರ ತಾಲೂಕಿನ ನಗರ ಬಳಿಯ ಮೂಡುಗುಪ್ಪದ ದುಬಾರತಟ್ಟಿ ನಿವಾಸಿ ಅಶ್ವಿನಿ (29) ಎಂದು ಗುರುತಿಸಲಾಗಿದೆ.
ಅಶ್ವಿನಿಯವರು ಮದುವೆಯಾಗಿ ಕೇವಲ ಒಂದೂವರೆ ವರ್ಷ ಆಗಿತ್ತು. ಆರೋಗ್ಯದಲ್ಲಿ ಏರುಪೇರು ಹಿನ್ನೆಲೆಯಲ್ಲಿ ಜನವರಿ 27 ಸಾಗರದ ತಾಲೂಕು ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಅಸ್ವಸ್ಥಗೊಂಡ ಅಶ್ವಿನಿಗೆ ವೈದ್ಯರು ಗರ್ಭಪಾತ ಮಾಡಿಸಿದ್ದಾರೆ. ಬಳಿಕವೂ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಈ ಹಿನ್ನಲೆಯಲ್ಲಿ ಗಂಭೀರ ಸ್ಥಿತಯಲ್ಲಿದ್ದ ಅಶ್ವಿನಿಯನ್ನು ಶಿವಮೊಗ್ಗ ಆಶ್ಪತ್ರೆಗೆ ಕರೆದುಕೊಂಡು ಹೋಗಲು ಸಾಗರ ಸರ್ಕಾರಿ ವೈದ್ಯರ ಸೂಚಿಸಿದ್ದಾರೆ. ಅದರಂತೆ ಕುಟುಂಬಸ್ಥರು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಕೆಲವೇ ಕ್ಷಣದಲ್ಲಿ ಅಶ್ವಿನಿ ಕೊನೆಯುಸಿರೆಳೆದಿದ್ದಾಳೆ.