ಉಡುಪಿ | ಶಾಂತಲಾ ಇವೆಂಟ್ಸ್ ಗೋಡೌನ್ ನಲ್ಲಿ ಬೆಂಕಿ: ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮ

ಉಡುಪಿ: ಉಡುಪಿಯ ಹೊರ ವಲಯದಲ್ಲಿರುವ ಅಲೆವೂರಿನಲ್ಲಿ ಬೆಂಕಿ ಅವಘಡವಾಗಿದೆ. ಶಾಂತಲಾ ಇವೆಂಟ್ಸ್ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.
ರಮಾನಂದ ನಾಯಕ್ ಒಡೆತನದ ಶಾಂತಲಾ ಇವೆಂಟ್ಸ್ ಗೋಡಾನ್ ನಲ್ಲಿ ಬೆಳಗಿನ ಜಾವ 3.30ರ ವೇಳೆ ಬೆಂಕಿ ಆಕಸ್ಮಿಕದ ಘಟನೆ ನಡೆದಿದ್ದು, ಶಾಮಿಯಾನ ಮ್ಯಾಟ್ ಗಳನ್ನು ಶೇಖರಿಸಿಟ್ಟಿದ್ದ ಸ್ಥಳದಲ್ಲಿ ಆರಂಭದಲ್ಲಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ವಾಟರ್ ಟ್ಯಾಂಕ್ ಸೇರಿದಂತೆ ಎಲ್ಲಾ ಪರಿಕರಗಳಿಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಅಗ್ನಿಶಾಮಕಗಳ ಸ್ಥಳ ಆಗಮಿಸಿ, ಬೆಂಕಿನಂದಿಸುವ ಕೆಲಸ ಮಾಡಿದೆ.