March 18, 2026

ಹೃದಯಾಘಾತದಿಂದ ನಟ ಸುದೀಪ್ ಪಾಂಡೆ ಮೃತ್ಯು

0
image_editor_output_image-2026113149-1737020451295.jpg

ಮುಂಬೈ: ಪ್ರಸಿದ್ಧ ಭೋಜ್ಪುರಿ ನಟ ಮತ್ತು ನಿರ್ಮಾಪಕ ಸುದೀಪ್ ಪಾಂಡೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ.

ಅವರ ಆಕಸ್ಮಿಕ ನಿಧನ ಭೋಜ್ಪುರಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ನಟನೆ, ನಿರ್ಮಾಣದ ಜೊತೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಇತ್ತೀಚೆಗೆ ಸಿನಿಮಾ ನಿರ್ಮಾಣದಲ್ಲಿ ಅವರು ನಷ್ಟ ಅನುಭವಿಸಿದ್ದರು.

ಜನವರಿ 15ರಂದು ಸುದೀಪ್ ಪಾಂಡೆಗೆ ಹೃದಯಾಘಾತ ಆಗಿದೆ. ಅವರು ಆ ಸಂದರ್ಭದಲ್ಲಿ ಮುಂಬೈನಲ್ಲಿ ಇದ್ದರು. ಅವರ ನಿಧನವಾರ್ತೆ ಕಾಡ್ಗಿಚ್ಚಿನಂತೆ ಹಬ್ಬಿದೆ. ಅವರು ಹಲವು ವರ್ಷಗಳಿಂದ ಭೋಜ್ಪುರಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದರು. ನಟನೆಯ ಜೊತೆಗೆ ನಿರ್ಮಾಣದಲ್ಲೂ ಅವರು ತೊಡಗಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರ ಆಪ್ತರು ಈ ವಿಚಾರ ಖಚಿತಪಡಿಸಿದ್ದಾರೆ. ಅವರ ಸಾವು ಭೋಜ್ಪುರಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

Leave a Reply

Your email address will not be published. Required fields are marked *

error: Content is protected !!