ಸಕಲೇಶಪುರ ಬಳಿ ಅಪಘಾತ: ಮೂವರು ಸಾವು: ಲಾರಿಯಡಿ ಹಲವರು ಸಿಲುಕಿರುವ ಶಂಕೆ

ಸಕಲೇಶಪುರ ಬಳಿ ಭೀಕರ ಅಪಘಾತ ಮೂವರು ಸಾವನ್ನಪ್ಪಿದ್ದರೆ ಲಾರಿಯಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸಕಲೇಶಪುರ ರಸ್ತೆಯ ಬದಿಯ ಕ್ಯಾಂಟಿನ್‌ಗೆ ನುಗ್ಗಿದ ಲಾರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಗುಳಗಳಲೆ ಸಮೀಪ ಘಟನೆ ನಡೆದಿದ್ದು, ಚಿತ್ರದುರ್ಗ ಮೂಲದ ವೀರೇಶ್ ಮೃತ ವ್ಯಕ್ತಿ, ಗಾರೆ ಕೆಲಸಕ್ಕೆ ಬಂದಿದ್ದ ವೀರೇಶ್, ಲಾರಿಯಲ್ಲಿ ಮೃತಪಟ್ಟವನ ಗುರುತು ಪತ್ತೆಯಾಗಿಲ್ಲ.
ಗಾಯಾಳುಗಳು ಸಕಲೇಶಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.