ಉಡುಪಿ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ: ಐವರು ಆರೋಪಿಗಳ ಬಂಧನ

ಉಡುಪಿ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಉಡುಪಿ ಸೆನ್ ಪೊಲೀಸರು ಮರವಂತೆ ಬೀಚ್ ಬಳಿ ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಉತ್ತರಕನ್ನಡ ಜಿಲ್ಲೆಯ ಅಬ್ರಾರ್ ಶೇಖ್, ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್, ಮೊಹಮ್ಮದ್ ಜಿಯಾಮ್ ಬೆಳ್ಳಿ, ನೌಮನ್, ಸಜ್ಜಾದ್ ಮಸ್ತಕೀಮ್ ಕೆವಾಕ ಎಂದು ಗುರುತಿಸಲಾಗಿದೆ. ಆರೋಪಿಗಳು ಮರವಂತೆ ಬೀಚ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾರಿನಲ್ಲಿ ನಿಷೇದಿತ ಮಾದಕ ವಸ್ತು MDMA ಪೌಡರ್‌ನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ದಾಳಿ ನಡೆಸಿ ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ 78 ಸಾವಿರ ಮೌಲ್ಯ 15 ಗ್ರಾಂ 59 ಮಿಲಿ ಗ್ರಾಂ ತೂಕದ ಎಂಡಿಎಂಎ ಪೌಡರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರೂ ಹಾಗೂ 5 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.