December 15, 2025

ಮುಂಬೈನಲ್ಲಿ ರಸ್ತೆ ಅಪಘಾತ:
ಉಡುಪಿಯ ನಿವಾಸಿ ಮೃತ್ಯು

0
image_editor_output_image-2088936862-1634965122486.jpg

ಉಡುಪಿ: ಮುಂಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಲ್ಲಿನ ಕೊಳಲಗಿರಿ ಮೂಲದ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ರೂಡಿ ರೋಷನ್ ಡಿಸೋಜಾ (33) ಮೃತಪಟ್ಟವರು.

ರೂಡಿ ರೋಷನ್ ಅವರು ಮುಂಬೈನ ಶಿಪ್‌ಯಾರ್ಡ್‌ನಲ್ಲಿ ಕಳೆದ 7 ವರ್ಷಗಳಿಂದ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಕ್ಟೋಬರ್ 22 ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ವೇಳೆ ಬೈಕ್ ಗೆ ಟ್ರಕ್ ಹಿಂದಿನಿಂದ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಸಾವನ್ನಪ್ಪಿದರು.

ಮೃತರು ತಂದೆ – ತಾಯಿ ಆಲ್ಫ್ರೆಡ್ ಡಿಸೋಜಾ ಮತ್ತು ಮೇರಿ ಡಿಸೋಜಾ, ಪತ್ನಿ ಸುರುಚಿ ಡಿಸೋಜಾ ಮತ್ತು ಪುತ್ರ ಇವಾನ್ ಡಿಸೋಜಾ ಅವರನ್ನು ಅಗಲಿದ್ದಾರೆ.

ರೂಡಿಯ ಪಾರ್ಥಿವ ಶರೀರವನ್ನು ಇಂದು ಊರಿಗೆ ತರಲಾಗುತ್ತಿದ್ದು, ಸಂಜೆ ಕೋಲಲಗಿರಿ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!