March 17, 2025

ರಫೀಕ್ ಸಅದಿ ಉಸ್ತಾದರ ಅಹ್ದಲಿಯ್ಯ ದರ್ಸ್ಸಿಲ್ವರ್ ಜ್ಯುಬಿಲಿ ಯಶಸ್ವಿಗೊಳಿಸಲು ಕರೆ

0

ವಿಟ್ಲ : ಸುಮಾರು 25 ವರ್ಷಗಳಿಂದ ದರ್ಸ್ ರಂಗದಲ್ಲಿ ಕ್ರಾಂತಿಯನ್ನು ಮೂಡಿಸುತ್ತಿರುವ ಪಂಡಿತರು,ವಿದ್ವಾಂಸರು ಪ್ರಮುಖ ಪ್ರಭಾಷಣಗಾರರೂ ಆದ ರಫೀಕ್ ಸಅದಿ  ದೇಲಂಪಾಡಿ ಉಸ್ತಾದ್,ಇಂದು ಕೇರಳ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ವ್ಯಕ್ತಿತ್ವ.

ಇವರು ಪೆರ್ಲ ಮರ್ತ್ಯ ಜುಮಾ ಮಸ್ಜಿದ್ ನಲ್ಲಿ ಹಲವು ವರ್ಷಗಳಿಂದ ದರ್ಸ್ ನಡೆಸುತ್ತಿರುವುದು ಎಲ್ಲರಿಗೂ ಚಿರಪರಿಚಿತ.ನೂರಾರು ಶಿಷ್ಯ ವೃಂದವನ್ನು ಸಮಾಜಕ್ಕೆ ಸಮರ್ಪಿಸಿರುವ ಅವರು ಇದೀಗ 25ನೇ ಅಹದಲಿಯ್ಯ ದರ್ಸ್ ವಾರ್ಷಿಕವನ್ನು ತಾರೀಖು 10/1/2025/ರಂದು ನಾಳೆ ಬಹಳ ವಿಜೃಂಭಣೆಯಿಂದ ಪೆರ್ಲ ಮೃರ್ತ್ಯ ಜುಮಾ ಮಸ್ಜಿದ್ ಸಭಾಂಗಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವೂ ನಾಳೆ ಬೆಳಿಗ್ಗೆ ಪ್ರಾರಂಭಗೊಂಡು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಅದ್ಧೂರಿಯಾಗಿ ಜರಗಳಿದೆ.ಈ ಕಾರ್ಯಕ್ರಮದಲ್ಲಿ ಪ್ರಮುಖ ವಿದ್ವಾಂಸರಾದ ಕುದುವತ್ತುಸ್ಸಾದಾತ್ ಕೆ.ಎಸ್ ಆಟಕೋಯ ತಂಙಳ್,ಬಹು ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ,ಮಾನಿಕೋತ್ತ್ ಉಸ್ತಾದ್,ಮಜೀದ್ ಬಾಖವಿ,ಕಣ್ಣವ ತಂಙಳ,ಅಬ್ದುಲ್ ಖಾದರ್ ಹಾಜಿ ಬೆಂಗಳೂರು,ಮಂಜೇಶ್ವರ ಶಾಸಕರಾದ ಅಶ್ರಫ್ ಹಾಗೂ ಹಲವು ವಿದ್ವಾಂಸರು ಉಮರಾ ನಾಯಕರು ಭಾಗವಹಿಸಲಿದ್ದಾರೆ.ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸುನ್ನೀ ಕಾರ್ಯಕರ್ತರು ಹಿತೈಷಿಗಳು  ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಸ್.ಎಂ.ಎ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಕರೆ ನೀಡಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!