March 18, 2026

ಖ್ಯಾತ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ ನಿಧನ

0
PJayachandran.jpg

ತ್ರಿಶೂರ್: ಮಲಯಾಳಂ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ (80) ನಿಧನರಾಗಿದ್ದಾರೆ.

ಜಯಚಂದ್ರ ಅವರು ಕಳೆದ ಒಂದು ವರ್ಷದಿಂದ ಲಿವರ್ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ತ್ರಿಶೂರ್‌ನ ಅಮಲಾ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಪಿ.ಜಯಚಂದ್ರನ್ ಅವರು ಐದು ದಶಕಗಳ ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದರು. ಮಲಯಾಳಂ ಸಂಗೀತ ಲೋಕಕ್ಕೆ 1,000ಕ್ಕೂ ಹೆಚ್ಚು ಸ್ಮರಣೀಯ ಹಾಡುಗಳನ್ನು ನೀಡಿದವರಾಗಿದ್ದಾರೆ. ಅವರ ಸುಮಧುರ ಕಂಠವು ಚಲನಚಿತ್ರ ಗೀತೆಗಳು, ಲಘು ಸಂಗೀತ ಮತ್ತು ಭಕ್ತಿಗೀತೆಗಳ ಮೂಲಕ ಸಂಗೀತ ಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿತು.

ಕನ್ನಡದಲ್ಲಿಯೂ ಒಲವಿನ ಉಡುಗೊರೆ ಕೊಡಲೇನು, ಹಿಂದೂಸ್ಥಾನವು ಎಂದೂ ಮರೆಯದ ಹೀಗೆ ಸಾವಿರಾರು ಹಾಡುಗಳನ್ನು ನೀಡಿದ್ದಾರೆ. ಸದ್ಯ ಜಯಚಂದ್ರನ್ ಅವರ ನಿಧನವು ಮಲಯಾಳಂ ಸಂಗೀತ ಪ್ರಪಂಚಕ್ಕೆ ಒಂದು ಯುಗವನ್ನು ಅಂತ್ಯಗೊಳಿಸಿದಂತಾಗಿದೆ.

Leave a Reply

Your email address will not be published. Required fields are marked *

error: Content is protected !!