March 17, 2025

ಕೇರಳ: ಮಸೀದಿ ಯ ಧಾರ್ಮಿಕ ಕಾರ್ಯಕ್ರಮ ವೇಳೆ ಮದವೇರಿದ ಆನೆ: ಆನೆಯ ದಾಳಿಗೆ ಓರ್ವ ಗಂಭೀರ, 17 ಮಂದಿಗೆ ಗಾಯ

0

ಮಲಪ್ಪುರಂ: ಜಿಲ್ಲೆಯಲ್ಲಿ ನಡೆದ ಪುದುಯಂಗಡಿ ನೆರ್ಚಾ ಉತ್ಸವ ಎಂಬ ಧಾರ್ಮಿಕ ಕಾರ್ಯಕ್ರಮದ ವೇಳೆ ಆನೆಯೊಂದು ದಾಳಿ ಮಾಡಿದ್ದರಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಇದರಿಂದ ಕಾಲ್ತುಳಿತವಾಗಿ 20 ಜನರಿಗೆ ತೀವ್ರ ಗಾಯಗಳಾಗಿವೆ.

ಗಾಯಾಳುಗಳು ತಿರೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾವುತರು ಹರಸಾಹಸಪಟ್ಟು ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಕೇರಳದ ಮಲಪ್ಪುರಂನ ತಿರೂರಿನ ಬಿ.ಪಿ.ಅಂಗಡಿಯ ಜಾರಮ್ ಮೈದಾನದಲ್ಲಿ ನಾಲ್ಕು ದಿನಗಳ ಪುತಿಯಂಗಡಿ ನೆರ್ಚಾ ವಾರ್ಷಿಕ ಉತ್ಸವಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಉತ್ಸವಕ್ಕಾಗಿ ಐದು ಆನೆಗಳು ಸಿಂಗಾರಗೊಂಡು ಭಾಗಿಯಾಗಿದ್ದವು. ಆದರೆ ಕಾರ್ಯಕ್ರಮ ಮುಗಿಯುವ ಕೆಲವೇ ಗಂಟೆಗಳ ಮೊದಲು ಪಕ್ಕೋತ್ ಶ್ರೀಕುಟ್ಟನ್ ಎಂಬ ಹೆಸರಿನ ಆನೆಯು ಏಕಾಏಕಿ ಆಕ್ರೋಶಗೊಂಡು ತನ್ನ ಮುಂದಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದೆ. ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿಕೊಂಡ ಆನೆ ಏಕಾಏಕಿ ಬಟ್ಟೆ ಒಗೆಯುವಂತೆ ನೆಲಕ್ಕೆ ಒಗೆದಿದೆ. ಬಳಿಕ ಅಲ್ಲಿ ನೆರೆದಿದ್ದ ಜನರತ್ತ ಆನೆ ನುಗ್ಗಿದ್ದು ಈ ವೇಳೆ ಕನಿಷ್ಟ 20 ಮಂದಿ ಗಾಯಗೊಂಡಿದ್ದಾರೆ ಮತ್ತು ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

 

 

Leave a Reply

Your email address will not be published. Required fields are marked *

error: Content is protected !!