ನಾಳೆ ಜ.9ರಿಂದ ಜ.19 ವರೆಗೆ ಕನ್ಯಾನ ಉದಯಾಸ್ತಮಾನ ಉರೂಸ್ ಮತ್ತು ಧಾರ್ಮಿಕ ಮತ ಪ್ರವಚನ

ವಿಟ್ಲ: ಜನವರಿ 9 ರಿಂದ 19ರ ವರೆಗೆ ಕನ್ಯಾನ ಖಾಝಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಘಣ ಅಧ್ಯಕ್ಷತೆಯಲ್ಲಿ ಉದಯಾಸ್ತಮಾನ ಉರೂಸ್ ಮತ್ತು ಮತ ಪ್ರವಚನ ನಡೆಯಲಿದೆ.
ಜ.19 ರಂದು ಹಗಲು ಮೌಲೀದ್ ಮಜ್ಲೀಸ್ ಮತ್ತು ಬೃಹತ್ ಅನ್ನದಾನ ಸೈಯದ್ ಕೆಎಸ್ ಆಟ್ಟಕೋಯ ತಂಙಳ್ ಕುಂಬೊಲ್ ಮತ್ತು ಕನ್ಯಾನ ಮುದರ್ರಿಸ್ ಶೈಖುನಾ ಇಬ್ರಾಹಿಂ ಫೈಝಿ ಅವರ ನೇತೃತ್ವದಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿ ಕೇರಳ ಕರ್ನಾಟಕದ ಸುಪ್ರಸಿದ್ಧ ವಾಗ್ಮಿಗಳು ಉಮರಾ ನಾಯಕರು ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. ಪ್ರತಿದಿನ ರಾತ್ರಿ ಖ್ಯಾತ ವಾಗ್ಮಿಗಳಿಂದ ಮತಪ್ರವಚನ ನಡೆಯಲಿದೆ ಎಂದು ಕನ್ಯಾನ ರಹ್ಮಾನಿಯ ಜುಮಾ ಮಸೀದಿ ಅಧ್ಯಕ್ಷರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.