ವಿಟ್ಲ: ಸೌಹಾರ್ಧ ಸಂಗಮ, 10 ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಹಾಯಾಕ್ಕಾಗಿ ಕ್ರಿಕೆಟ್ ಪಂದ್ಯಾಟ

ವಿಟ್ಲ: ಡಿ’ ಗ್ರೂಪ್ ಸ್ಪೋರ್ಟ್ಸ್ ಕ್ಲಬ್, ಶೈನ್ ಅಟಾಕರ್ಸ್ ವಿಟ್ಲ ಹಾಗೂ ಹೋಟೆಲ್ ಶಾಲೆಟ್ ಬೆಂಗಳೂರು ಇದರ ವತಿಯಿಂದ ಸೌಹಾರ್ಧ ಸಂಗಮ ಹಾಗೂ ಹತ್ತು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಹಾಯಾಕ್ಕಾಗಿ ಕ್ರಿಕೆಟ್ ಪಂದ್ಯಾಟ ವಿಟ್ಲ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.
ಡಿ’ ಗ್ರೂಪ್(ರಿ) ವಿಟ್ಲ ಇದರ ಅಧ್ಯಕ್ಷ ವಿ.ಹೆಚ್. ರಿಯಾಝ್ ಉದ್ಘಾಟಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಶಾಕಿರ್ ಅಳಕೆಮಜಲು, ಹಂಝ ವಿ, ಖಲಂದರ್ ಪರ್ತಿಪಾಡಿ, ವಿ.ಕೆ.ಎಂ.ಹಂಝ, ಬಶೀರ್ ಬೊಬ್ಬೆಕ್ಕೇರಿ, ಇಸ್ಮಾಯಿಲ್ ಸೂಪರ್, ಇರ್ಷಾದ್ ಸೆಲೆಕ್ಟ್, ರಾಝಿ ಸ್ಪೈಸಿ, ಮಹಮ್ಮದ್ ಅಲಿ ವಿಟ್ಲ, ಅಬೂಬಕರ್ ಅನಿಲಕಟ್ಟೆ, ಶಾಫಿ ಎಮ್.ಎಸ್.ಡಿ, ಸತೀಶ್ ವಿಟ್ಲ, ಆಶ್ವಿನ್ ಕಿರಣ್ ಶೆಟ್ಟಿ ವಿಟ್ಲ, ಸಂಜೀವ ಪೂಜಾರಿ, ಅನೀಲ್ ಪಂಚಲಿಂಗೇಶ್ವರ, ವಿರಾಜ್ ವಿಗ್ನೇಶ್ವರ ಗ್ರೂಪ್ಸ್, ನವಾಝ್ ರೆಡ್, ಅಕ್ಬರ್ ನಂದಾವರ, ರಾಝಿ ಡಿ, ನಮೀರ್, ರಮೀಝ್, ಸಿಬಾಕ್, ರಝಾಕ್ ಸಲ್ಮಾರ ಮೊದಲಾದವರು ಉಪಸ್ಥಿತರಿದ್ದರು. ಈ ಪಂದ್ಯಾಕೂಟದ ಚಾಂಪಿಯನ್ ಪಟ್ಟವನ್ನು ಟೀಮ್ 45 ಪಡೆಯಿತು.
ರನ್ನರ್ ಅಫ್ ಪಟ್ಟವನ್ನು ವಿ ಟೂರ್ಸ್ ವಿಟ್ಲ ತಂಡವು ಪಡೆದುಕೊಂಡಿತು. ಇದೇ ಸಂದರ್ಭದಲ್ಲಿ ಒಂದು ಡಯಾಲಿಸ್ ರೋಗಿಯ ಚಿಕಿತ್ಸೆಗಾಗಿ ಲಕ್ಕಿ ಡ್ರಾ ನಡೆಸಲಾಯಿತು. ಪ್ರಥಮ ಸ್ಥಾನವಾದ ಟೀವಿಯನ್ನು ಕೂಪನ್ ನಂಬರ್ 057 ಹಾಗೂ ಎರಡನೇ ಸ್ಥಾನವಾದ ಮಿಕ್ಸಿಯನ್ನು ಕೂಪನ್ ನಂಬರ್ 287 ವಿಜಯಿಯಾದರು.