ಮಂಗಳೂರು: ಆಕಸ್ಮಿಕ ಗುಂಡು ತಗಲಿ ವ್ಯಕ್ತಿಗೆ ಗಾಯ

ಮಂಗಳೂರು: ವ್ಯಕ್ತಿಯೊಬ್ಬರಿಗೆ ಆಕಸ್ಮಿಕ ಗುಂಡು ತಗುಲಿ ಗಾಯಗೊಂಡಿರುವ ಘಟನೆ ವಾಮಂಜೂರಿನಲ್ಲಿ ಸೋಮವಾರ(ಜ.6) ಸಂಜೆ ಸಂಭವಿಸಿದೆ.ಸಫ್ವಾನ್ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.
ವಾಮಂಜೂರಿನ ಅಂಗಡಿಯೊಂದಕ್ಕೆ ಬಂದಿದ್ದ ವೇಳೆ ಗ್ರಾಹಕರೊಬ್ಬರು ಇಟ್ಟಿದ್ದ ರಿವಾಲ್ವರ್ ನ್ನು ಸಫ್ವಾನ್ ಪರಿಶೀಲಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ್ದು, ಪರಿಣಾಮ ಸಫ್ವಾನ್ ಹೊಟ್ಟೆಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ.