March 26, 2026

ಪತ್ನಿಯನ್ನು ಕತ್ತು ಹಿಸುಕಿ ಕೊಂದು ಪೊಲೀಸ್ ಠಾಣೆಗೆ ತೆರಳಿ ಶರಣಾದ ಪತಿ

0
image_editor_output_image-1967440145-1736165530158.jpg

ಕೊಪ್ಪಳ: ಪತ್ನಿಯ ಕತ್ತು ಹಿಸುಕಿ ಪತಿ ಕೊಲೆಗೈದ ಘಟನೆ ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ರೇಣುಕಾ ಸಂಗಟಿ ಎಂದು ಗುರುತಿಸಲಾಗಿದೆ. 4 ವರ್ಷದ ಹಿಂದೆ ಅನಿಲ ಹಾಗೂ ರೇಣುಕಾ ಮದುವೆಯಾಗಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಕುಟುಂಬಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಜೊತೆಗೆ ಸ್ವತಃ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿ ಅನಿಲ ದಿನನಿತ್ಯ ಕುಡಿದು ಬಂದು ರೇಣುಕಾಳಿಗೆ ಕಿರುಕುಳ ನೀಡ್ತಿದ್ದ ಎಂದು ರೇಣುಕಾ ಕುಟುಂಬಸ್ಥರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!