ಹಿರಿಯ ಸಾಹಿಯಿ ಡಾ. ನಾ ಡಿಸೋಜ ನಿಧನ
ಮಂಗಳೂರು: ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ನಾಡಿನ ಹಿರಿಯ ಸಾಹಿಯಿ ಡಾ. ನಾ ಡಿಸೋಜ ಅವರು ಇಂದು ನಿಧನರಾಗಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿ ಹಿರಿಯ ಸಾಹಿತಿ ನಾ ಡಿಸೋಜ ಚಿಕಿತ್ಸೆ ಪಡೆಯುತ್ತಿದ್ದರು.
ಮಂಗಳೂರಿನಿಂದ ನಾಳೆ ಮೂರು ಗಂಟೆಗೆ ಸಾಗರಕ್ಕೆ ನಾ ಡಿಸೋಜ ಅವರ ಪಾರ್ಥೀವ ಶರೀರ ತಲುಪಲಿದೆ. ಸಾಗರದ ನಗರಸಭೆ ಆವರಣದಲ್ಲಿರುವಂತ ಗಾಂಧಿ ಮೈದಾನದಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜನವರಿ.7ರಂದು ಮೃತ ನಾ.ಡಿಸೋಜ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಸಾಗರದಲ್ಲಿ ನೆರವೇರಿಸುವುದಾಗಿ ತಿಳಿಸಿದ್ದಾರೆ. ಮೃತ ನಾ.ಡಿಸೋಜ ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.





