ಕೊಡಂಗಾಯಿ ಮಸ್ಜಿದ್ ಯಾಸೀನ್ ಉದ್ಘಾಟನೆ: ಮಸೀದಿ, ಮದ್ರಸಗಳಿಂದ ಮಾನವೀಯತೆಯ ಸಂದೇಶ: ಪಾಣಕ್ಕಾಡ್ ಮುಈನ್ ಅಲಿ ಶಿಹಾಬ್ ತಂಙಳ್
ವಿಟ್ಲ: ಮಸೀದಿಗಳು ಮತ್ತು ಮದ್ರಸಗಳು ಶಾಂತಿ, ಪ್ರೀತಿ ಹಾಗೂ ಮಾನವೀಯತೆಯ ಸಂದೇಶವನ್ನು ಸಾರುವ ಪವಿತ್ರ ತಾಣಗಳಾಗಿವೆ. ಮುಸ್ಲಿಮರ ಆರಾಧನಾ ಸ್ಥಳವಾದ ಮಸೀದಿ ಮತ್ತು ಮಕ್ಕಳಿಗೆ ಧಾರ್ಮಿಕ ಜ್ಞಾನ ಬೋಧಿಸುವ ಮದ್ರಸಗಳ ಪಾವಿತ್ರ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪಾಣಕ್ಕಾಡ್ ಸಯ್ಯಿದ್ ಮುಈನ್ ಅಲಿ ಶಿಹಾಬ್ ತಂಙಳ್ ಹೇಳಿದರು.

ಅವರು ಕೊಡಂಗಾಯಿ ರಾಧುಕಟ್ಟೆ ಮಸ್ಜಿದ್ ಯಾಸೀನ್ ಮತ್ತು ಶಂಸುಲ್ ಹುದಾ ಮದ್ರಸದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕೆಡುಕುಮುಕ್ತ, ಒಳಿತಿನ ಸಮಾಜವನ್ನು ನಿರ್ಮಿಸುವಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳು ಪ್ರೇರಣೆಯಾಗಬೇಕು ಆಗ ಸ್ವಸ್ಥ ಸಮಾಜ ನಿರ್ಮಾಣ ವಾಗುವುದು ಎಂದು ಅವರು ಅಭಿಪ್ರಾಯಪಟ್ಟರು. ಎಂ ಜೆ ಎಂ ಅಧ್ಯಕ್ಷರಾದ ಅಬ್ದುಲ್ ಕುಂಞ ಮೂರ್ಜೆಬೆಟ್ಟು ಧ್ವಜಾರೋಹಣ ನೆರವೇರಿಸಿ, ಎಂ ಜೆ ಎಂ ಖತೀಬರಾದ ಬಿ ಎ ಸಿದ್ದೀಕ್ ಅರ್ಷದಿ ದುವಾ ನಡೆಸಿ ಚಾಲನೆಗೊಂಡ ಸಮಾರಂಭದಲ್ಲಿ ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಸೀದಿಯ ವಕ್ಫ್ ನಿರ್ವಹಣೆ ನಡೆಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಯ್ಯಿದ್ ಪೂಕುಂಞ ತಂಙಳ್ ಉದ್ಯಾವರ ಅವರು ನೂತನ ಮದ್ರಸ ಕಟ್ಟಡವನ್ನು ಉದ್ಗಾಟಿಸಿದರು.
‘ಸಮಸ್ತ’ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರು ಶುಭ ಹಾರೈಸಿದರು. ಮದ್ರಸ ಸಮಿತಿ ಅಧ್ಯಕ್ಷ ಕೆ.ಕೆ.ಇಸ್ಮಾಯಿಲ್ ಮುಸ್ಲಿಯಾರ್ ಮೌಲಿದ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡಂಗಾಯಿ ಪ್ರಸ್ತಾವಿಕ ಭಾಷಣ ನಡೆಸಿದರು. ಅಬ್ದುರ್ರಹ್ಮಾನ್ ಫೈಝ್ಹಿ ಆಶಂಸ ಭಾಷಣ, ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಮುಖ್ಯ ಭಾಷಣ ನಡೆಸಿದರು.
ಸಮಾರಂಭದಲ್ಲಿ ಸುಲೈಮಾನ್ ಹಾಜಿ ಬೈತಡ್ಕ, ಹಸೈನಾರ್ ಮುಸ್ಲಿಯಾರ್ ರಾಧುಕಟ್ಟೆ, ದಾವೂದ್ ಹನೀಫಿ,ಅಬ್ಬಾಸ್ ಮದನಿ ಸರಳಿಕಟ್ಟೆ, ಅಬ್ದುರ್ರಹ್ಮಾನ್ ಸಹದಿ,ರಜಬ್ ಫೈಝಿ ಕುಕ್ಕಾಜೆ,ಇಸ್ಮಾಯಿಲ್ ಮುಸ್ಲಿಯಾರ್ ನೆದ್ಯಾಳ, ಸಿ ಎಚ್ ಇಬ್ರಾಹಿಂ ಮುಸ್ಲಿಯಾರ್, ಹಸೈನಾರ್ ಮುಸ್ಲಿಯಾರ್ ಕರೈ, ದ.ಕ.ಜಿಲ್ಲಾ ಪಂ.ಮಾಜಿ ಉಪಾದ್ಯಕ್ಷರಾದ ಎಂ.ಎಸ್.ಮುಹಮ್ಮದ್, ಮಹಮೂದ್ ಮುಸ್ಲಿಯಾರ್, ಹಂಝ್ಹ ಝ್ಹುಹ್ರಿ,ಗಫೂರ್ ಹನೀಫಿ, ಇಬ್ರಾಹಿಂ ಝ್ಹೈನಿ, ಪ್ರಚಾರ ಸಮಿತಿ ಗೌರವಾದ್ಯಕ್ಷರಾದ ಫಾರೂಕ್ ಟಿಂಬರ್, ಸ್ವಾಗತ ಸಮಿತಿ ಅಧ್ಯಕ್ಷ ಮಹಮ್ಮದ್ ಮಾಮು, ಪ್ರಚಾರ ಸಮಿತಿ ಅಧ್ಯಕ್ಷ ಹಮೀದ್ ಟಿ, ಲತೀಫ್ ಡಿ.ಎಂ.ಎಲ್.ಕೊಡಿಪ್ಪಾಡಿ, ಬಶೀರ್ ಉಪ್ಪಳ, ಫಾರೂಕ್ ವಿ.ಕೆ.ಪ್ಲೈವುಡ್ ಮಂಜೇಶ್ವರ, ಆಶಿರ್ ವುಡ್ ಕಜೆ, ರಝಾಕ್ ಕೆ.ಎಂ.ಕೆ.ವುಡ್ ಸಂಪ್ಯ, ಅಶ್ರಫ್ ಕುಂಡಡ್ಕ, ಆರಿಫ್ ಕರೈ, ವಿ ಎಸ್ ಇಬ್ರಾಹಿಂ ಒಕ್ಕೆತ್ತೂರು, ಯಾಸೀರ್ ಇಂಜಿನಿಯರ್, ಇಸ್ಮಾಯಿಲ್ ಹಾಜಿ ಅರಫಾ, ಮಹಮ್ಮದ್ ಕುಂಞ ಎ ಎಂ, ಅಬ್ದುರ್ರಹ್ಮಾನ್ ಮೇಲಂಗಡಿ, ಅಬ್ದುಲ್ಲ ಹಾಜಿ ಕುಕ್ಕಿಲ, ಉಮರ್ ದಾರಿಮಿ ಪರ್ತಿಪ್ಪಾಡಿ, ಅನೀಸ್ ಎಂ ಎಚ್, ಮುನೀರ್ ದರ್ಬೆ, ಗ್ರಾಮ ಪಂಚಾಯತ್ ಸದಸ್ಯರಾದ ಸಂದೇಶ್ ಶೆಟ್ಟಿ ಬಿಕ್ನಾಜೆ, ರವೀಶ್ ಶೆಟ್ಟಿ ಕರ್ಕಳ, ನಾಗೇಶ್ ಶೆಟ್ಟಿ ಕೊಡಂಗಾಯಿ, ಮಹ್ಮೂದ್ ಕಡಂಬು, ಸುಭಾಶ್ಚಂದ್ರ ಶೆಟ್ಟಿ ಕುಲಾಳು, ಸಾಮಾಜಿಕ ಮುಖಂಡರಾದ ಚಂದಪ್ಪ ರೈ ಮಾರುಗುಳಿ, ಉಮೇಶ್ ಶೆಟ್ಟಿ ತಾರಿಯಡ್ಕ, ಹರೀಶ್ ಕೊಟ್ಟಾರಿ ಮಾರುಗುಳಿ, ಖಲಂದರ್ ಪರ್ತಿಪ್ಪಾಡಿ, ಶಾಕಿರ್ ಅಳಕೆ ಮಜಲ್, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಸುಲೈಮಾನ್ ಹಾಜಿ ಕೆ ಎಸ್, ಖಾದರ್ ಸಿ ಎಚ್, ಕೆ ಎಸ್ ಮುಹಮ್ಮದ್, ಅಶ್ರಫ್ ಸೈಬರ್ ಪೊಯಿಂಟ್, ಪ್ರಚಾರ ಸಮಿತಿ ಕನ್ವೀನರ್ ಮಜೀದ್ ಟಿ ಎಂ, ಹನೀಫ್ ಪಿ, ಹಮೀದ್ ಮಾರುಗುಳಿ, ಹಾರಿಸ್ ಎಸ್ ಕೆ, ಶಾಹುಲ್ ಹಮೀದ್ ಗುತ್ತಿಗೆದಾರರು, ಹಸೈನಾರ್ ಟಿ ಎಂ, ಅಝ್ಹರುದ್ದೀನ್, ಇಬ್ರಾಹಿಂ ಕೊಣಪಕಟ್ಟೆ, ಅಲೀಮ್, ಸಮದ್, ಹಸನ್, ಕರೀಂ, ಅಶ್ರಫ್, ಉಮರ್ ಉಪಸ್ಥಿತರಿದ್ದರು. ಕೆ ಎಂ ಎ ಕೊಡುಂಗಾಯಿ ಸ್ವಾಗತಿಸಿ, ಉಮರ್ ಮುಸ್ಲಿಯಾರ್ ಟಿಪ್ಪುನಗರ ಧನ್ಯವಾದ ಅರ್ಪಿಸಿದರು.




