ಪಾನಿಪುರಿ ಭಯ್ಯನ ವಾರ್ಷಿಕ ವಹಿವಾಟು 40 ಲಕ್ಷ ರೂ. ಆದಾಯ: GST ಕಟ್ಟುವಂತೆ ನೋಟಿಸ್ ಜಾರಿ

ತಮಿಳುನಾಡು: ಪಾನಿಪುರಿ ಅಂಗಡಿಯವನ ವಾರ್ಷಿಕ ಆದಾಯ ಕಂಡು ತೆರಿಗೆ ಅಧಿಕಾರಿಗಳು ಕೂಡ ಬೆಚ್ಚಿಬಿದ್ದಿದ್ದಾರೆ. ಇಷ್ಟೆಲ್ಲ ವ್ಯವಹಾರ ನಡೆಸಿ ಯಾಕಪ್ಪಾ ಜಿಎಸ್‌ಟಿ ಕಟ್ಟುತ್ತಿಲ್ಲ? ಎಂದು ನೋಟಿಸ್ ಕೂಡ ಜಾರಿ ಮಾಡಿದ್ದಾರೆ.
ಈ ನೋಟಿಸ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೋಟಿಸ್‌ನಲ್ಲಿ ಪಾನಿಪುರಿ ಅಂಗಡಿಯವನ 2023-2024ನೇ ಸಾಲಿನ ವಹಿವಾಟು ಬರೋಬ್ಬರಿ 40,11,019 ರೂಪಾಯಿ ಎಂದು ಉಲ್ಲೇಖಿಸಿದೆ.
ಈ ವೈರಲ್ ಆಗಿರುವ ನೋಟಿಸ್ ತಮಿಳುನಾಡಿನದ್ದು ಎಂದು ಹೇಳಲಾಗುತ್ತಿದೆ. ವಾರ್ಷಿಕವಾಗಿ ಲಕ್ಷಗಟ್ಟಲೆ ವಹಿವಾಟು ನಡೆಸಿರುವ ಪಾನಿಪುರಿ ಭಯ್ಯಾ…ಯಾವುದೇ ಜಿಎಸ್‌ಟಿ ಪಾವತಿಸಿಲ್ಲ, ಜಿಎಸ್‌ಟಿ ವ್ಯಾಪ್ತಿಗೂ ತನ್ನ ವ್ಯಾಪಾರವನ್ನು ಒಳಪಡಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಇದನ್ನು ನೋಟಿಸ್‌ನಲ್ಲಿ ಉಲ್ಲೇಖಿಸಿರುವ ತೆರಿಗೆ ಅಧಿಕಾರಿಗಳು, ನಿಮ್ಮ ರೋಜರ್‌ಪೇ ಹಾಗೂ ಫೋನ್‌ಪೇ ಮಾಹಿತಿ ಆಧರಿಸಿ ಈ ನೋಟಿಸ್ ನೀಡುತ್ತಿದ್ದೇವೆ. ನೀವು ಸರಕು ಮತ್ತು ಸೇವೆ ಹೊರತುಪಡಿಸಿ ಯುಪಿಐ ವಹಿವಾಟು ನಡೆಸಿದ್ದೀರಿ. ನಿಮ್ಮ ಖಾತೆಗೆ ಬರೋಬ್ಬರಿ 40,11,019 ರೂಪಾಯಿ ಹಣ ಪಾವತಿಯಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಿದೆ.