March 16, 2025

ಪೆರುವಾಯಿ ಶಾಲಾ ವಾರ್ಷಿಕೋತ್ಸವ: ನಿವೃತ್ತ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

0

ವಿಟ್ಲ: ಅನುದಾನಿತ ಹಿರಿಯ ಪಾಥಮಿಕ ಶಾಲೆ ಪೆರುವಾಯಿಯ ಶಾಲಾ ವಾರ್ಷಿಕೋತ್ಸವ ಮತ್ತು ಮುಖ್ಯೋಪಾಧ್ಯಾಯರ ಬೀಳ್ಕೊಡುಗೆ
ಸಮಾರಂಭವನ್ನು ಅವರ ಗುರುಗಳೂ, ನಿವೃತ್ತ ಮುಖ್ಯೋಪಾಧ್ಯಾಯರಾದ ಮುಖ್ಯ
ತಾಳಿಯ‌ ಗುರುಗಳು, ನಿವೃತ್ತ ಮುಖ್ಯೋಪಾ ಧ್ಯಾಯರಾದ ಎಂ. ತಿರುಮಲೇಶ್ವರ ಭಟ್ ಅವರು
ಉದ್ಘಾಟಿಸಿದರು.

ಬಳಿಕ ಮಾತಾಡಿದ ಅವರು “ಒಬ್ಬ ವ್ಯಕ್ತಿಯು ಸರಿದಾರಿಯಲ್ಲಿ ನಡೆದರೆ ಶ್ರೇಷ್ಠ ವ್ಯಕ್ತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಹೇಳಿದರು.

ಮಕ್ಕಳಿಂದ ರಚಿಸಲ್ಪಟ್ಟ ಚಿಗುರು ಪತ್ರಿಕೆಯನ್ನು ರಾಜ್ಯ ಪಶಸ್ತಿ ವಿಜೇತ ಬಂಟ್ವಾಳ ತಾಲ್ಲೂಕು ಮಕ್ಕಳ
ಸಾಹಿತ್ಯ ಲೋಕದ ಅಧ್ಯಕ್ಷರು ಆಗಿರುವ ರಮೇಶ್ ಎಂ. ಬಾಯಾರ್ ಬಿಡುಗಡೆಗೊಳಿಸಿದರು. ಶಾಲಾ ಸಂಚಾಲಕರಾದ ಸಚಿನ್ ಅಡ್ವಾಯಿ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮಕ್ಕೆ
ಸ್ವಾಗತಿಸಿದರು.

 

 

ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ, ಶಾಲಾ ವಿದ್ಯಾರ್ಥಿಗಳು, ಶಾಲಾಡಳಿತ ಮಂಡಳಿ ಮತ್ತು ಶಾಲಾ ಎಸ್.ಡಿ.ಎಮ್‌.ಸಿ. ವತಿಯಿಂದ ಮುಖ್ಯೋಪಾಧ್ಯಾಯರಾದ ಕುಂಞ ನಾಯ್ಕ ಇವರನ್ನು ಸನ್ಮಾನಿಸಲಾಯಿತು. ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರಿಗೆ ಬಂಗಾರದ ಉಡುಗೊರೆ ನೀಡಿ ಸನ್ಮಾನಿಸಲಾಯಿತು.
ವ್ಯವಸಾಯ ಸೇವಾ ಸಹಕಾರಿ
ಸಂಘ ಪೆರುವಾಯಿ ಇದರ ವತಿಯಿಂದ ಗೌರವಾರ್ಪಣೆ ನಡೆಯಿತು.
ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಪುಷ್ಪ, ನರಸಿಂಹ ಭಟ್, ನಿವೃತ್ತ ಶಿಕ್ಷಕರಾದ ರಾಮಯ್ಯ ಶೆಟ್ಟಿ, ಜಯರಾಮ ರೈ, ವಿಷ್ಣು ಭಟ್, ಗ್ರಾಮ ಪಂಚಾಯತ್‌ ಅಧ್ಯಕ್ಷೆ ನಫೀಸ ಕಡೆಂಬಿಲ, ಉಪಾಧ್ಯಕ್ಷರಾದ ಲಲಿತ ಆಚಾರ್ಯ, ಎಸ್ ಡಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಆಡಳಿತ ಮಂಡಳಿ ಸದಸ್ಯ ರಾಜೇಂದ್ರ ನಾಥ್ ರೈ, ಕೃಷ್ಣ ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡೆ ಹಾಗೂ ಇತರ ಚಟುವಟಿಕೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅಡುಗೆ ಸಿಬ್ಬಂದಿಯಾಗಿ ನಿವೃತ್ತಿಯಾದ ಗೀತಾ ಅವರನ್ನು ಗೌರವಿಸಲಾಯಿತು. ಶಿಕ್ಷಕ ವೃಂದದವರನ್ನು ಗೌರವಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರು ವರದಿ ವಾಚಿಸಿದರು. ಗೌರವ ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ವರ್ಷಿತ, ಉಷಾ, ಮಾಲತಿ ಬಹುಮಾನ ಪಟ್ಟಿ ವಾಚಿಸಿದರು. ಶಿಕ್ಷಕ ಪ್ರಭಾಕರ್ ಎಂ. ವಂದಿಸಿದರು.

Leave a Reply

Your email address will not be published. Required fields are marked *

error: Content is protected !!