ಅಜ್ಮೇರ್ ದರ್ಗಾಗೆ ಚಾದರ್ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ

ರಾಜಸ್ಥಾನ: ಅಜ್ಮೇರ್ ದರ್ಗಾಗೆ ವಾಡಿಕೆಯಂತೆ ಪ್ರಧಾನಿ ಮೋದಿ ಪವಿತ್ರ ಚಾದರ್ ಅರ್ಪಿಸಿದ್ದಾರೆ. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ಮೋದಿ ಚಾದರ್ ಅನ್ನು ಹಸ್ತಾಂತರಿಸಿದ್ದು, ಪ್ರಧಾನಿ ಪರವಾಗಿ ಶನಿವಾರ ಅಜ್ಮೇರ್ ಷರೀಫ್ ದರ್ಗಾಗೆ ರಿಜಿಜು ಭೇಟಿ ನೀಡಿ ಚಾದರ್ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರೂಸ್ ಅಂಗವಾಗಿ ಈ ಚಾದರ್ ಅರ್ಪಿಸಲಾಗುತ್ತದೆ. ಪ್ರಧಾನಿಯಾದ ಬಳಿಕ ಕಳೆದ 10 ವರ್ಷಗಳಿಂದಲೂ ಮೋದಿ ಈ ಚಾದರ್ ನೀಡುತ್ತಾ ಬಂದಿದ್ದಾರೆ. ಇದೀಗ 11ನೇ ಬಾರಿ ಅವರು ಚಾದರ್ ನೀಡುತ್ತಿದ್ದಾರೆ. ಈ ದರ್ಗಾದ ಕೆಳಗೆ ಶಿವನ ದೇವಾಲಯವಿದ್ದು ಈ ಬಗ್ಗೆ ಸಮೀಕ್ಷೆ ನಡೆಸಬೇಕೆಂದು ಅರ್ಜಿದಾರರೊಬ್ಬರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಭಾರೀ ಚರ್ಚೆಗೆ ನಾಂದಿ ಹಾಡಿತ್ತು.