ಕಾರು ಸಮೇತ ನದಿಗೆ ಬಿದ್ದು ಚಾಲಕ ಸಾವು
ಬೆಳಗಾವಿ: ಕಾರು ಸಮೇತ ನದಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮ ಬಳಿಯ ಘಟಪ್ರಭಾ ನದಿಯಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ನಿವಾಸಿ ಕಿರಣ ಲಕ್ಷ್ಮಣ ನಾವಲಗಿ(45) ಮೃತ ದುರ್ದೈವಿ. ಬ್ಯೂಟಿ ಪಾರ್ಲರ್ ಉದ್ಯಮ ನಡೆಸುತ್ತಿದ್ದ ಮೃತ ಕಿರಣ ಡಿಸೆಂಬರ್ 30 ರಂದು ಮನೆಯಲ್ಲಿ ಯಾರಿಗೂ ಹೇಳದೇ ಕಾರು ತೆಗೆದುಕೊಂಡು ತೆರಳಿದ್ದರು.




