ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯ ನೂತನ ಕಟ್ಟಡದ ಕಾಮಗಾರಿಗೆ ಚಾಲನೆ

ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿ ಇದರ ನೂತನ ಕಟ್ಟಡದ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು. ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಅವರು ಪ್ರಾರ್ಥನೆಯ ಮೂಲಕ ಶಿಕ್ಷಣ ಸಂಸ್ಥೆಯ ವಿವಿಧ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಸಯ್ಯಿದ್ ಎಸ್.ಎಂ.ತಂಙಳ್ ಸಾಲ್ಮರ, ಸಯ್ಯಿದ್ ಯಹ್ಯಾ ತಂಙಳ್ ಅಲ್ ಹಾದಿ ಸಾಲ್ಮರ, ಉಸ್ಮಾನುಲ್ ಫೈಝಿ ತೋಡಾರ್, ಉಮರ್ ದಾರಿಮಿ ಸಾಲ್ಮರ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಅಬ್ದುಲ್ ಕರೀಂ ದಾರಿಮಿ ದರ್ಬೆ,ಕೆ.ಎಂ.ಎ.ಕೊಡುಂಗಾಯಿ, ಇರ್ಶಾದ್ ಫೈಝಿ ಮುಕ್ವೆ, ಹಾಶಿಂ ರಹ್ಮಾನಿ ಸಾಲ್ಮರ, ಆಸೀಫ್ ಹಾಜಿ ದರ್ಬೆ,ಫೈರೋಝ್ ಹಾಜಿ ಪರ್ಲಡ್ಕ, ಸುಹೈಲ್ ಕೋಡಿಂಬಾಡಿ, ಸಲೀಂ ಕೂರ್ನಡ್ಕ ದಮಾಮ್, ಝಕರಿಯಾ ಕೊರಿಂಗಿಲ ಬುರೈದ, ಶರೀಫ್ ಬೈತಡ್ಕ ದುಬೈ, ಅಶ್ರಫ್ ಶಾರ್ಜಾ, ಬಾವಾ ಕೂರ್ನಡ್ಕ ಶಾರ್ಜಾ, ಶಫೀಕ್ ಪರ್ಲಡ್ಕ ದುಬೈ, ಮುಹಮ್ಮದ್ ಪಳ್ಳತ್ತೂರು ದುಬೈ, ಹಸನ್ ಹಾಜಿ ಸಿಟಿ ಬಝಾರ್, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಅಬ್ದುಲ್ ರಹಿಮಾನ್ ಹಾಜಿ ಆರ್.ಟಿ.ಒ., ಅಬ್ದುಲ್ ಬಶೀರ್ ಹಾಜಿ ದರ್ಬೆ, ಅಶ್ರಫ್ ಹಾಜಿ ಪರ್ಲಡ್ಕ, ಅಬ್ದುಲ್ ಹಮೀದ್ ಸಾಲ್ಮರ, ಹುಸೈನ್ ಹಾಜಿ ಕೆ.ಬಿ.ಕೆ.ಕೋಡಿಂಬಾಡಿ, ಯೂಸೂಫ್ ಸಾಲ್ಮರ, ಇಸ್ಮಾಯಿಲ್ ಸಾಲ್ಮರ, ಉಮರ್ ಸಂಪ್ಯ, ಜಮಾಲ್ ಹಾಜಿ ಮುಕ್ವೆ, ಶಾಹುಲ್ ಹಮೀದ್ ಕೊಡಂಗಾಯಿ, ಅನ್ವರ್ ಖಾಸಿಂ ಸಾಲ್ಮರ, ಅಬ್ದುಲ್ ಲತೀಫ್ ಸಾಲ್ಮರ, ಫಾರೂಕ್ ಎಲ್.ಟಿ.ಕೂರ್ನಡ್ಕ, ಅಶ್ರಫ್ ಪರ್ಲಡ್ಕ, ಅಬ್ದುಲ್ ಲತೀಫ್ ದರ್ಬೆ, ರಿಯಾಝ್ ಇಂಜಿನಿಯರ್ ವಳತ್ತಡ್ಕ, ಶಾಫಿ ಇಂಜಿನಿಯರ್ ಪಾಪತ್ತಡ್ಕ, ಸಯ್ಯಿದ್ ಅಫ್ಹಾಮ್ ತಂಙಳ್ ಕರಾವಳಿ, ಇಲ್ಯಾಸ್ ಸಾಲ್ಮರ, ಬಶೀರ್ ಸಿಟಿ ಗುರುಪುರ, ಅಬ್ದುಲ್ ರಶೀದ್ ಹಾಜಿ ನೈತಾಡಿ, ಡಿ.ಕೆ.ಅಬ್ದುಲ್ ಹಮೀದ್ ಕೆಮ್ಮಾಯಿ, ಬಾತಿಷಾ ಸಾಲ್ಮರ, ಪುತ್ತಬ ಸಾಲ್ಮರ, ಬಾವಾ ಹಾಜಿ ಕೂರ್ನಡ್ಕ, ಅಬ್ದುಲ್ಲಾ ಪಿ.ಬಿ.ಎ.ಬೋಳಂಗಡಿ, ಅಬ್ದುಲ್ ಲತೀಫ್ ಮಾಸ್ಟರ್ ಆತೂರು, ಝಹ್ರಾನ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಐದು ವರ್ಷಗಳ ಹಿಂದೆ ಸಾಲ್ಮರ ಸಾದಾತ್ ಮಹಲ್‌ನಲ್ಲಿ ಸಣ್ಣ ಕಟ್ಟಡದಲ್ಲಿ ಆರಂಭಿಸಲಾದ ಈ ಶಿಕ್ಷಣ ಸಂಸ್ಥೆಗೆ ಇದೀಗ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಕರ್ಯಕ್ಕಾಗಿ ಸಂಸ್ಥೆಯ ಸಮೀಪದಲ್ಲೇ ವಿಶಾಲವಾದ ಜಾಗದಲ್ಲಿ ನೂತನ ಸುಸಜ್ಜಿತ ಕಟ್ಟಡ ಗಳು ನಿರ್ಮಾಣವಾಗಲಿದ್ದು, ‘ಸಮಸ್ತ’ ದ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತು ಕೋಯ ತಂಙಳ್ ಅವರು ಇತ್ತೀಚೆಗೆ ನೂತನ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಿದ್ದರು. ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಬಹುಮುಖ್ಯ ಕಟ್ಟಡಗಳು ಶೀಘ್ರದಲ್ಲೇ ತಲೆಯೆತ್ತಲಿದೆ.
ಪವಿತ್ರ ಖುರ್ ಆನ್ ಕಂಠಪಾಠ ದ ಹಿಫ್ಲುಲ್ ಖುರ್ ಆನ್ ಕಾಲೇಜ್, ‘ಸಮಸ್ತ’ ದ ಅಧೀನದ ಅತ್ಯಾಧುನಿಕ ಪಠ್ಯಕ್ರಮದಡಿ ಎಸ್.ಎನ್.ಇ.ಸಿ. ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆ, ಪ್ರತಿಭಾವಂತ ದಾಇ ಗಳನ್ನು ರೂಪಿಸುವ ಪ್ರಪೋಗೇಶನ್ ಸೆಂಟರ್, ಬಡ, ನಿರ್ಗತಿಕರಿಗೆ ನೆರವಾಗುವ ಚಾರಿಟಿ ಸೆಂಟರ್, ಇಸ್ಲಾಮಿಕ್ ಸ್ಟಡಿ ಸೆಂಟರ್, ಬೋರ್ಡಿಂಗ್ ಮದ್ರಸ, ವುಮೆನ್ಸ್ ಕಾಲೇಜ್ ಮೊದಲಾದ ಹಲವು ಯೋಜನೆಗಳನ್ನು ಸಂಸ್ಥೆಯು ಹಾಕಿ ಕೊಂಡಿದ್ದು, ಹಂತಹಂತವಾಗಿ ಇವೆಲ್ಲವೂ ಕಾರ್ಯ ರೂಪಕ್ಕೆ ಬರಲಿದೆ.
ಸಂಸ್ಥೆಯ ಆರ್ಗನೈಝರ್ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.