ಜ.2 ರಂದು ಕೊಡಂಗಾಯಿ ಮಸ್ಜಿದ್ ಯಾಸೀನ್,ಶಂಸುಲ್ ಹುದಾ ಮದ್ರಸ ಉದ್ಘಾಟನೆ

ವಿಟ್ಲ: ಕೊಡಂಗಾಯಿ ರಾಧುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಮಸ್ಜಿದ್ ಯಾಸೀನ್ ಹಾಗೂ ಶಂಸುಲ್ ಹುದಾ ಮದ್ರಸ ಕಟ್ಟಡದ ಉದ್ಘಾಟನೆ ಹಾಗೂ ಏಕದಿನ ಧಾರ್ಮಿಕ ಮತ ಪ್ರಭಾಷಣ ಜ. 2ರ ಗುರುವಾರ ಸಂಜೆ 5 ಗಂಟೆಗೆ ಕೊಡಂಗಾಯಿ ರಾಧುಕಟ್ಟೆಯಲ್ಲಿ ನಡೆಯಲಿದೆ.
ಅಸ್ಸಯ್ಯಿದ್ ಮುಹೀನ್ ಅಲಿ ಶಿಹಾ ಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಲಿದ್ದಾರೆ. ವಕ್ಫ್ ನಿರ್ವಹಣೆಯನ್ನು ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹ್ ಹರಿ ಅವರು ನರವೇರಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆ ಹಾಗೂ ಮದ್ರಸ ಉದ್ಘಾಟನೆಯನ್ನು ಕೊಡಂಗಾಯಿ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಅಸ್ಸಯ್ಯಿದ್ ಪೂಕುಂಞ ತಂಙಳ್ ಉದ್ಯಾವರ ಅವರು ನೆರವೇರಿಸುವರು.
ಸಮಾರಂಭದಲ್ಲಿ ಬಹು: ಖಾಝಿ ಬಂಬ್ರಾಣ ಉಸ್ತಾದ್,ಬಿ ಎ ಸಿದ್ದೀಕ್ ಅರ್ಷದಿ,ಕೆ ಬಿ ದಾರಿಮಿ, ಕೆ.ಕೆ ಇಸ್ಮಾಯಿಲ್ ಮುಸ್ಲಿಯಾರ್, ಸುಲೈಮಾನ್ ಹಾಜಿ ಬೈತಡ್ಕ, ಕೆ.ಎಂ.ಎ ಕೊಡುಂಗಾಯಿ ಮೊದಲಾದ ಹಲವಾರು ಗಣ್ಯರು ಭಾಗವಹಿಸುವರು ಎಂದು ಸ್ವಾಗತ ಸಮಿತಿಯ ಫಾರೂಕ್ ಕುಂಡಡ್ಕ, ಮುಹಮ್ಮದ್ ಮಾಮು, ಹಮೀದ್ ಟಿ, ಅಬ್ದುಲ್ ಮಜೀದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.