ಪ್ರಧಾನಿ ಹೆಸರಿನಲ್ಲಿ ವಂಚನೆ: ಓಡಿಶಾ ದಂಪತಿಯ ಬಂಧನ
ಭುವನೇಶ್ವರ: ಪಿಎಂ ಪ್ರಧಾನ ಕಾರ್ಯದರ್ಶಿಯ ಮಗಳು ಹಾಗೂ ಅಳಿಯನ ಸೋಗಿನಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಓಡಿಶಾ ದಂಪತಿಯನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಕಂಧಮಾಲ್ ಜಿಲ್ಲೆಯ ನಿವಾಸಿ ಪತ್ನಿ ಹನ್ಸಿತಾ ಅಭಿಲಿಪ್ಸಾ (38) ಹಾಗೂ ಪತಿ ಅನಿಲ್ ಕುಮಾರ್ ಮೊಹಂತಿ ಎಂದು ಗುರುತಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರ ಮಗಳು ಮತ್ತು ಅಳಿಯನ ಸೋಗಿನಲ್ಲಿ ಬಂದು ಜನರನ್ನು ವಂಚಿಸುತ್ತಿದ್ದರು ಹಾಗೂ ನಾವು ಪ್ರಭಾವಿಗಳ ಸಂಪರ್ಕವನ್ನು ಹೊಂದಿದ್ದೇವೆ ಎಂದು ಹೇಳಿಕೊಂಡು ವಂಚನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಒಡಿಶಾ ಪೊಲೀಸರು ಬಂಧಿಸಿದ್ದಾರೆ.




