ಡಿಸೆಂಬರ್ 26: ಪುತ್ತೂರಿನಲ್ಲಿ “ಮಾದಕತೆ ಮಾರಣಾಂತಿಕ” ಬಹುಭಾಷಾ ಕವಿಗೋಷ್ಠಿ

ಪುತ್ತೂರು: ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಇಖ್ಬಾಲ್ ಬಾಳಿಲ ಬರೆದಿರುವ “ಮಾದಕತೆ ಮಾರಣಾಂತಿಕ” ಪುಸ್ತಕ ಬಿಡುಗಡೆ ಅಂಗವಾಗಿ ಡಿಸೆಂಬರ್ 26 ರಂದು ಸಂಜೆ 4:30 ಕ್ಕೆ ಪುತ್ತೂರು ಸುದಾನ ಮೈದಾನದಲ್ಲಿ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ಸ್ವಾಗತ ಭಾಷಣ ಮಾಡಲಿದ್ದಾರೆ.
ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ಕವಿಗೋಷ್ಠಿ ಅಧ್ಯಕ್ಷತೆ ವಹಿಸಲಿದ್ದು, ಹವ್ಯಾಸಿ ಪತ್ರಕರ್ತ ಕೆ.ಎ.ಅಬ್ದುಲ್ ಅಝೀಝ್ ಪುಣಚ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ನಗರ ಪೋಲಿಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಆಶಯ ಭಾಷಣ ಮಾಡುವರು. ಪುಸ್ತಕ ಬಿಡುಗಡೆ ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಶಾ ಮಾಂತೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನಾರಾಯಣ ರೈ ಕುಕ್ಕುವಳ್ಳಿ, ಹೃದಯ ಕವಿ ಮನ್ಸೂರ್ ಮೂಲ್ಕಿ, ಡಾ|ಸುರೇಶ್ ನೆಗಳಗುಳಿ, ಎನ್.ಎಂ ಹನೀಫ್ ನಂದರಬೆಟ್ಟು, ನಾರಾಯಣ ಕುಂಬ್ರ, ಅಶ್ರಫ್ ಅಪೋಲೋ, ಸಲೀಂ ಮಾಣಿ, ಝುನೈಫ್ ಕೋಲ್ಪೆ, ಎಂ.ಪಿ ಬಶೀರ್ ಅಹಮದ್ ಬಂಟ್ವಾಳ, ಗಣೇಶ್ ಪ್ರಸಾದ್ ಪಾಂಡೇಲು, ಶಂಶೀರ್ ಬುಡೋಳಿ, ಅಬ್ದುಲ್ ಸಮದ್ ಬಾವಾ ಪುತ್ತೂರು, ಎಂ.ಎ ಮುಸ್ತಫಾ ಬೆಳ್ಳಾರೆ ಮೊದಲಾದವರು ಕವನ ವಾಚನ ಮಾಡಲಿದ್ದಾರೆ. ಬಳಿಕ “ಮಾದಕತೆ ಮಾರಣಾಂತಿಕ” ಪುಸ್ತಕ ಬಿಡುಗಡೆ ನಡೆಯಲಿದೆ ಎಂದು ಕರ್ನಾಟಕ ಭಾವೈಕ್ಯ ಪರಿಷತ್ ನ ಜಿಲ್ಲಾ ಉಪಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ ತಿಳಿಸಿದ್ದಾರೆ.