ಕಮರಿಗೆ ಉರುಳಿ ಬಿದ್ದ ಸೇನಾ ವಾಹನ: ಮೃತಪಟ್ಟ ಐವರಲ್ಲಿ ಮೂವರು ಕರ್ನಾಟಕ ಮೂಲದವರು

ಜಮ್ಮು ಮತ್ತು ಕಾಶ್ಮೀರ: ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನ ಕಮರಿಗೆ ಉರುಳಿ ಬಿದ್ದಿದ್ದೆ. ಪರಿಣಾಮ ಐವರು ಯೋಧರು ಮೃತಪಟ್ಟಿದ್ದು, ಇನ್ನೂ ಐವರಿಗೆ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನಾ ವಾಹನ ಕಮರಿಗೆ ಉರುಳಿಬಿದ್ದ ಪರಿಣಾಮ ಮೃತಪಟ್ಟ ಐವರಲ್ಲಿ ಮೂವರು ಕರ್ನಾಟಕ ಮೂಲದವರು ಎಂದು ತಿಳಿದುಬಂದಿದೆ. ಸೇನಾ ವಾಹನಲ್ಲಿ 18 ಯೋಧರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇವರಲ್ಲಿ 5 ಮಂದಿ ಹುತಾತ್ಮರಾಗಿದ್ದಾರೆ.
ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸೇನಾಧಿಕಾರಿಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿದೆ. ಈ ಟ್ರಕ್ನಲ್ಲಿ ಮೂವರು ಕರ್ನಾಟಕ ಮೂಲದ ಯೋಧರು ಕೂಡ ಪ್ರಯಾಣಿಸುತ್ತಿದ್ದರು. ಈ ದುರಂತದಲ್ಲಿ ಕರ್ನಾಟಕ ಮೂಲದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ದಯಾನಂದ್ ಎಂಬುವವರು ಹುತಾತ್ಮರಾಗಿದ್ದಾರೆ.