December 22, 2024

WWE ಸೂಪರ್ ಸ್ಟಾರ್ ರೇಮಿಸ್ಟೀರಿಯೊ ಸೀನಿಯರ್ ನಿಧನ

0

ಮೆಕ್ಸಿಕೊ: ಖ್ಯಾತ ಮೆಕ್ಸಿಕನ್ ಕುಸ್ತಿಪಟು, ಡಬ್ಲ್ಯೂ ಡಬ್ಲ್ಯೂಇ ಸೂಪರ್‌ಸ್ಟಾರ್ ರೇ ಮಿಸ್ಟೀರಿಯೊ ಜೂನಿಯರ್ ಅವರ ಚಿಕ್ಕಪ್ಪ ರೇ ಮಿಸ್ಟೀರಿಯೊ ಸೀನಿಯರ್ ಡಿಸೆಂಬರ್ 20ರಂದು ನಿಧನರಾದರು ಎಂದು ಅವರ ಕುಟುಂಬ ದೃಢಪಡಿಸಿದೆ. ಮಿಸ್ಟೀರಿಯೊ ಸೀನಿಯರ್ ಅವರು 66 ನೇ ವಯಸ್ಸಿನಲ್ಲಿ ನಿಧನರಾದರು.

ಮಿಸ್ಟೀರಿಯೊ ಸೀನಿಯರ್ ಅವರು ಮೆಕ್ಸಿಕೋದಲ್ಲಿನ ಲುಚಾ ಲಿಬ್ರೆ ಕೂಟದಲ್ಲಿ ಖ್ಯಾತಿ ಗಳಿಸಿದರು, ವರ್ಲ್ಡ್ ವ್ರೆಸ್ಲಿಂಗ್ ಅಸೋಸಿಯೇಷನ್ ಮತ್ತು ಲುಚಾ ಲಿಬ್ರೆ ಎಎಎ ವರ್ಲ್ಡ್‌ ವೈಡ್‌ ನಂತಹ ಪ್ರಮುಖ ಸಂಸ್ಥೆಗಳೊಂದಿಗೆ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗಳಿಸಿದರು. ಇದನ್ನು ಸಾಮಾನ್ಯವಾಗಿ ಮೆಕ್ಸಿಕೋದ ಡಬ್ಲ್ಯೂ ಡಬ್ಲ್ಯೂಇ ಸಮಾನವೆಂದು ಪರಿಗಣಿಸಲಾಗುತ್ತದೆ.

ಅವರು 1990 ರಲ್ಲಿ ವಿಶ್ವ ಚಾಂಪಿಯನ್‌ ಶಿಪ್ ವ್ರೆಸ್ಲಿಂಗ್‌ ನ ಸ್ಟಾರ್‌ ಕೇಡ್‌ನಂತಹ ಈವೆಂಟ್‌ಗಳನ್ನು ಒಳಗೊಂಡಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅವರ ಹಾರುವ ಶೈಲಿಯಿಂದ ಹೆಸರುವಾಸಿಯಾಗಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!