March 27, 2026

ಪುತ್ತೂರು: ಬಸ್ ನಿಲ್ದಾಣದಲ್ಲಿ ಬ್ಯಾಗಿನಿಂದ ಚಿನ್ನಾಭರಣ ಕಳವು: ಮೂವರು ಆರೋಪಿಗಳ ಬಂಧನ

0
image_editor_output_image-1484840411-1734766394221.jpg

ಪುತ್ತೂರು: ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗೋಳ್ತಮಜಲು ಗ್ರಾಮದ ನಿವಾಸಿ ಶ್ರೀಮತಿ ಸರಸ್ವತಿ ಎಂಬವರ ಬ್ಯಾಗಿನಿಂದ ಚಿನ್ನಾಭರಣಗಳನ್ನು ಯಾರೋ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ನಗರ ಪೊಲೀಸ್‌ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿತೆಯರಾದ ರಾಜಾಜಿನಗರ ಬೆಂಗಳೂರು ನಿವಾಸಿಗಳಾದ ಜ್ಯೋತಿ ಹಾಗೂ ಶ್ರೀಮತಿ ಯಶೋದ ಎಂಬವರುಗಳನ್ನು ದಸ್ತಗಿರಿ ಮಾಡಿ, ಅವರಿಂದ ಕಳವಾದ ರೂ 25,000/- ಮೌಲ್ಯದ ಚಿನ್ನಾಭರಣವನ್ನು ವಶಡಿಸಿಕೊಂಡಿರುತ್ತಾರೆ.

ಇನ್ನೊಂದು ಪ್ರಕರಣದಲ್ಲಿ ದಿನಾಂಕ 13-12-2024 ರಂದು ಪುತ್ತೂರು ಪೇಟೆಯ ಕೋರ್ಟ್ ರಸ್ತೆಯಲ್ಲಿರುವ ಜ್ಯುವೆಲ್ಲರ್ಸ್ ಶಾಪ್ ನಿಂದ ಚಿನ್ನ ಖರೀದಿ ಮಾಡುವ ನೆಪದಲ್ಲಿ ಬಂದು, ರೂ 77000 /- ಮೌಲ್ಯದ 09 ಗ್ರಾಂ ತೂಕದ 03 ಚಿನ್ನದ ಉಂಗುರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನಾಂಕ 19-12-2024 ರಂದು ಜ್ಯುವೆಲ್ಲರ್ಸ್‌ ಮಾಲಕರಾದ ಶಿವಪ್ರಸಾದ್ ಭಟ್ ರವರು ನೀಡಿದ ದೂರಿನ ಮೇರೆಗೆ, ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ: 121/2024 ಕಲಂ: 305 ಬಿಎನ್‌ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿತೆ ನೀರುಮಾರ್ಗ ಮಂಗಳೂರು ನಿವಾಸಿ ವಿದ್ಯಾ ಎಂಬವರನ್ನು ದಸ್ತಗಿರಿ ಮಾಡಿ, ಕಳವಾದ ಒಟ್ಟು ರೂ 77000 /- ಮೌಲ್ಯದ ಚಿನ್ನಾಭರಣವನ್ನು ವಶಡಿಸಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!