February 4, 2026

ಉಪ್ಪಿನಂಗಡಿ: ಕಂಠಪೂರ್ತಿ ಮಧ್ಯ ಕುಡಿದು ಬಸ್ ಚಲಾಯಿಸಿದ ಚಾಲಕ: ಚಾಲಕನನ್ನು ತರಾಟೆಗೆ ತೆಗೆದು ಪೊಲೀಸರ ವಶಕ್ಕೆ ನೀಡಿದ ನಾಗರಿಕರು

0
n6436732321734405082269f8c9ba810574aeac2aabb99f7cc1aba45ac12575869384fc45e8c3ec694c18ea.jpg

ಉಪ್ಪಿನಂಗಡಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕನೊಬ್ಬ ಕಂಠಪೂರ್ತಿ ಕುಡಿದು ಯದ್ವಾತದ್ವ ಬಸ್‌ ಚಲಾಯಿಸಿ ಪ್ರಯಾಣಿಕರನ್ನು ಭೀತಿಯಲ್ಲಿ ಕೆಡವಿದ ಘಟನೆ ರವಿವಾರ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.

ಪುತ್ತೂರಿನಿಂದ ಉಪ್ಪಿನಂಗಡಿಗೆ ಆಗಮಿಸಿ ಆಲಂತಾಯದತ್ತ ಸಾಗುತ್ತಿದ್ದ ಕೆಎಸ್‍ಆರ್ ಟಿಸಿ ಬಸ್ಸು ಕೆ ಎ 19 ಎಫ್ 3324 ಅನ್ನು ಆದರ ಚಾಲಕ ಮದ್ಯ ಸೇವಿಸಿ ಚಲಾಯಿಸಿದ್ದನೆನ್ನಲಾಗಿದ್ದು, ಮದ್ಯದ ಅಮಲಿನಲ್ಲಿ ತೇಲಾಡುತ್ತಾ ಬಸ್ಸನ್ನು ಮನಸೋ ಇಚ್ಚೆ ಚಲಾಯಿಸಿದ ಪರಿಣಾಮ ಬಸ್ಸಿನಲ್ಲಿದ್ದ ಮಹಿಳೆಯರು, ಮಕ್ಕಳು ಭಯಭೀತರಾಗಿ ಚೀರಾಡತೊಡಗಿದರು.

ಬಸ್ಸಿನಲ್ಲಿದ್ದ ಪ್ರಯಾಣಿಕರ ಚೀರಾಟವನ್ನು ಕಂಡ ಸ್ಥಳೀಯ ನಾಗರಿಕರು ಬಸ್ಸನ್ನು ನಿಲ್ಲಿಸಲು ಮುಂದಾಗಿ ಬಸ್ಸು ನಿಲ್ಲುತ್ತಿದ್ದಂತೆಯೇ ಚಾಲಕನನ್ನು ಬಸ್ಸಿನಿಂದ ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡರು. ಆದಾಗ್ಯೂ ಮದ್ಯದ ಅಮಲಿನಲ್ಲಿ ದೇಹದ ನಿಯಂತ್ರಣ ಕಳೆದುಕೊಂಡು ತೂರಾಡುತ್ತಿದ್ದ ಚಾಲಕನನ್ನು ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಪ್ರಯಾಣಿಕರು ಅತಂತ್ರರಾಗುವುದನ್ನು ತಪ್ಪಿಸುವ ಸಲುವಾಗಿ ನಿರ್ವಾಹಕನೇ ಬಸ್ಸನ್ನು ಚಲಾಯಿಸಿದರು.

Leave a Reply

Your email address will not be published. Required fields are marked *

error: Content is protected !!