ಬಂಟ್ವಾಳ: ರೈಲ್ವೆ ಹಳಿಯ ಬಳಿ ಅಪರಿಚಿತ ಶವ ಪತ್ತೆ:
ಬಂಟ್ವಾಳ: ಇಲ್ಲಿನ ನೆತ್ತರಕೆರೆ ಎಂಬಲ್ಲಿ ರೈಲ್ವೆ ಹಳಿಯ ಬದಿಯ ಪೊದೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು ನಾನಾ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದು ,ಬಂಟ್ವಾಳ ನಗರ ಪೋಲೀಸರು ಹಾಗೂ ಮಂಗಳೂರು ರೈಲ್ವೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ತುಂಬೆ ಸಮೀಪದ ನೆತ್ತರಕೆರೆ ಎಂಬಲ್ಲಿ ರೈಲು ಹಳಿಯ ಸಮೀಪದಲ್ಲಿ ಸುಮಾರು 40 ವರ್ಷ ವಯಸ್ಸಿನ ಗಂಡಸಿನ ಶವ ಪತ್ತೆಯಾಗಿದೆ.
ಅಪರಿಚಿತ ವ್ಯಕ್ತಿಯ ತಲೆಯ ಮೇಲೆ ಗಾಯವಾದ ಕುರುಹುಗಳು ಕಂಡುಬಂದಿದ್ದು, ರಕ್ತಸಿಕ್ತ ಮಾದರಿಯಲ್ಲಿರುವ ಶವವನ್ನು ಕಂಡು ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಈತನ ಬಗ್ಗೆ ಈವರೆಗೆ ಮಾಹಿತಿ ಲಭ್ಯವಾಗಿಲ್ಲ, ಆದರೆ ಈತ ರೈಲು ಪ್ರಯಾಣಿಕನ ಅಥವಾ ಪಾದಚಾರಿಯಾ? ಹೀಗೆ ಯಾವುದಕ್ಕೂ ಸ್ಪಷ್ಟವಾದ ಉತ್ತರವಿಲ್ಲ.
ರೈಲು ಪ್ರಯಾಣಿಕನಾಗಿದ್ದು ರೈಲಿನಿಂದ ಬಿದ್ದಿರಬಹುದಾ? ಅಥವಾ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಅಥವಾ ಪಾದಾಚಾರಿ ಮೇಲೆ ರೈಲು ಡಿಕ್ಕಿಯಾಗಿರಬಹುದಾ? ಅಥವಾ ಇನ್ನೇನಾದರೂ ನಡೆದಿರಬಹುದಾ? ಎಂಬ ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದ್ದು,ಪೋಲಿಸ್ ತನಿಖೆಯ ಬಳಿಕ ಸ್ಪಷ್ಟವಾಗದ ಮಾಹಿತಿ ಸಿಗಬೇಕು.ಅಲ್ಲಿವರೆಗೂ ಕಾಯಬೇಕಾಗಿದೆ.