December 18, 2024

ಎಮರ್ಜೆನ್ಸಿ ಹೆಲ್ಫ್ ಲೈನ್ ಚಾರಿಟೇಬಲ್ ಟ್ರಸ್ಟ್ (ರಿ)ದ.ಕ ಕರ್ನಾಟಕ: ಉಳ್ಳಾಳ ಬ್ರಾಂಚ್ ಘಟಕದ ನೂತನ ಸರ್ಜಿಕಲ್ ಕಚೇರಿ ಉದ್ಘಾಟನೆ

0

ಮಂಗಳೂರು: ಎಮರ್ಜೆನ್ಸಿ ಹೆಲ್ಫ್ ಲೈನ್ ಚಾರಿಟೇಬಲ್ ಟ್ರಸ್ಟ್ (ರಿ)ದ.ಕ ಕರ್ನಾಟಕ ಇದರ ಉಳ್ಳಾಳ ಬ್ರಾಂಚ್ ಘಟಕದ ನೂತನ ಸರ್ಜಿಕಲ್ ಕಚೇರಿ ಉದ್ಘಾಟನೆ ಹಾಗೂ ಸರ್ಜಿಕಲ್ ಉಪಕರಣಗಳ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ 15/12/2024 ಆದಿತ್ಯವಾರ ಬೆಳಿಗ್ಗೆ 10:30 ಗಂಟೆಗೆ ಉಳ್ಳಾಳ ಮಾಸ್ತಿಕಟ್ಟೆ ದರ್ಗಾ ರೋಡ್ ಪರಿಸದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎಮರ್ಜೆನ್ಸಿ ಹೆಲ್ಫ್ ಲೈನ್ ಸಂಸ್ಥೆಯ ಅಧ್ಯಕ್ಷರಾದ ಸೌಕತ್ ಇಂದಬೆಟ್ಟು, ಬಿ.ಜಿ. ಹನೀಫ್ ಹಾಜಿ ಅಧ್ಯಕ್ಷರು ಹಝ್ರತ್ ಸೆಯ್ಯದ್ ಮದನಿ ದರ್ಗಾ ಸಮಿತಿ ಉಳ್ಳಾಲ, ಮುಸ್ತಫಾ ಅಬ್ದುಲ್ಲಾ ಅಧ್ಯಕ್ಷರು ಮುಹಿಯದ್ದೀನ್ ಜುಮಾ ಮಸೀದಿ ಹೊಸಪಳ್ಳಿ ಮೇಲoಗಡಿ, ಉಳ್ಳಾಲ HN ಬಾಲಕೃಷ್ಣ ಉಳ್ಳಾಲ ಸರ್ಕಲ್ ಇನ್ಸ್ಪೆಕ್ಟರ್, ಹಬೀಬುರಹ್ಮಾನ್ ಅಲ್ ಫಾಝಿಲಿ ಖತೀಬರು ಒಂಬತ್ತುಕೆರೆ, ಅಬ್ದುಲ್ ಬಿಷರ್ ಮಕ್ದೂಮಿ, ಮುಹಝೀನ್ ಉಸ್ತಾದ್ ಮುಹಿಯದ್ದೀನ್ ಜುಮಾ ಮಸೀದಿ ಹೊಸಪಲ್ಲಿ ಮೇಲoಗಡಿ ಉಳ್ಳಾಲ, ಹಾರೂನ್ ರಶೀದ್ ಅಗ್ನಾಡಿ ಕಾರ್ಯನಿರ್ವಹಕರು ಮತ್ತು ಸಲಹೆಗಾರರು ಎಮರ್ಜನ್ಸಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ (ರಿ) ದಕ್ಷಿಣ ಕನ್ನಡ ಕರ್ನಾಟಕ, ಡಾ|| ಹರಿದಾಸ್ ರೈ ವ್ಯವಸ್ಥಾಪಕ ನಿರ್ದೇಶಕರು ಸಹಾರ ಆಸ್ಪತ್ರೆ ಉಳ್ಳಾಲ, ಬಶೀರ್ ಉಳ್ಳಾಲ ಸದಸ್ಯರು ಉಳ್ಳಾಲ ನಗರ ಸಭೆ, ಜಬ್ಬಾರ್ ಸದಸ್ಯರು ಉಳ್ಳಾಲ ನಗರ ಸಭೆ, ಮೊಹಮ್ಮದ್ ಯು.ಬಿ ವ್ಯವಸ್ಥಾಪಕ ನಿರ್ದೇಶಕರು ಸುಲ್ತಾನ್ ಬಿಲ್ಡರ್ಸ್ ಮಂಗಳೂರು, ಕಲೀಲ್ ಮುಕ್ಕಚ್ಚೇರಿ ಅಧ್ಯಕ್ಷರು UCB ಉಳ್ಳಾಲ,ಅಬುಬಕ್ಕರ್ ಉಳ್ಳಾಲ ಅಧ್ಯಕ್ಷರು SDPI ಉಳ್ಳಾಲ ನಗರ ಸಮಿತಿ,ಮೊಹಮ್ಮದ್ ಕಲವರ್ ಸದಸ್ಯರು ಎಮರ್ಜನ್ಸಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ (ರಿ) ದಕ್ಷಿಣ ಕನ್ನಡ ಕರ್ನಾಟಕ,BSP ಬಶೀರ್ ಮಾಲಕರು BSP ವೆಜಿಟೇಬಲ್ ಗ್ಲೋಬಲ್ ಮಾರ್ಕೆಟ್ ಕಲ್ಲಾಪು,A M ಬಶೀರ್ ವ್ಯಾಪಾರಸ್ಥರು ಗ್ಲೋಬಲ್ ಮಾರ್ಕೆಟ್ ಕಲ್ಲಾಪು ಉಪಸ್ಥಿತರಿದ್ದರು.

 

 

ಸ್ವಾಗತ ಭಾಷಣವನ್ನು ನಿಝಮುದ್ದೀನ್ ಉಲ್ಲಾಳ ಮಾಡಿದರು, ಉದ್ಘಾಟನೆ ಕಾರ್ಯಕ್ರಮವನ್ನು ಒಂಬತ್ತುಕೆರೆ ಖತೀಬ್ ಉಸ್ತಾದ್ ಮಾಡಿ ದುಹಾ ಆಶೀರ್ವಚಗೈದರು. ಸಂಸ್ಥೆಯ ಬಗ್ಗೆ ಸ್ಫೂರ್ತಿದಾಯಕ ಹಿತನುಡಿಯನ್ನು ಸಂಸ್ಥೆಯ ಸಲಹೆಗಾರರಾದ ಹಾರೂನ್ ರಶೀದ್ ಅಗ್ನಡಿ ಮಾಡಿದರು. ಸಮಾಜಸೇವೆಯ ಮಹತ್ವ ಹಾಗೂ ಸಮಾಜ ಸೇವೆಯ ಸಲಹೆಯನ್ನು ಸಂಸ್ಥೆಯ ಸಲಹೆಸೂಚನೆಗರರಾದ ಮೊಹಮ್ಮದ್ ಕಳವರು ವಿವರಿಸಿದರು.

ವೇದಿಕೆಯ ಗಣ್ಯ ವ್ಯಕ್ತಿಗಳು ತುರ್ತು ಸಂದರ್ಭದಲ್ಲಿ ರಾತ್ರಿ ಹಗಲೆನ್ನದೇ ಸಮಾಜ ಸೇವೆಯನ್ನು ಮಾಡುತ್ತಿರುವ ಎಮರ್ಜೆನ್ಸಿ ಹೆಲ್ಫ್ ಸಂಸ್ಥೆಯ ಸದಸ್ಯರ ಹಾಗೂ ಕಾರ್ಯನಿರ್ವಾಹಕರ ಕೆಲಸಕಾರ್ಯಗಳನ್ನು ಪ್ರಸಂಶಿಸುವ ಮೂಲಕ ಅಭಿನಂದಿಸಿದರು. ಮುಂದಕ್ಕೂ ಇಂತಹ ಸೇವೆಗಳು ನಿರಂತರವಾಗಿ ನಡೆಯಲಿ ನಿಮ್ಮ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಬೆನ್ನೆಲುಬಾಗಿ ನಾವು ಕೂಡ ಇದ್ದೇವೆ ಎಂಬ ಭರವಸೆಯನ್ನು ನೀಡಿದರು.

ಲವು ಸಮಾಜಮುಖಿ ಕೆಲಸಕಾರ್ಯಗಳನ್ನು ಗುರುತಿಸುವ ಮೂಲಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!