ವಿಟ್ಲ: ಮಂಗಿಲಪದವು ಐಡಿಯಲ್ ಪ್ಯೂಯಲ್ ನಲ್ಲಿ ಸಿಎನ್‌ಜಿ ( CNG) ಘಟಕ ಶುಭಾರಂಭ
ವಿಟ್ಲ: ಮಂಗಳಪದವು ಐಡಿಯಲ್ ಫ್ಯೂಯಲ್ ಪೆಟ್ರೋಲ್ ಪಂಪ್ ನಲ್ಲಿ ಶುಕ್ರವಾರ ಸಿಎನ್ ಜಿ(CNG) ಘಟಕಕ್ಕೆ ಚಾಲನೆ ನೀಡಲಾಯಿತು.
ನೂತನ ಸಿ ಎನ್ ಜಿ ಘಟಕವನ್ನು
ಇಬ್ರಾಹಿಂ ಹಾಜಿ THMA ಹಾಗೂ ಇಬ್ರಾಹಿಂ KP ಜಂಟಿಯಾಗಿ ಉದ್ಘಾಟಿಸಿದರು. ಇಂಡಿಯನ್ ಆಯಿಲ್ ಫೀಲ್ಡ್ ಅಧಿಕಾರಿ ಅಜಿಂಕ್ಯ ರಾಧಾಕೃಷ್ಣ ಹಾಗೂ ಗೈಲ್ ಗ್ಯಾಸ್ ಮುಖ್ಯ ಇಂಜಿನಿಯೆರ್ ರಿಂಕೂ ರಾಥೋರ್ ಮಹೇಂದ್ರ ಪಿಕ್ ಅಪ್ ವಾಹನಕ್ಕೆ CNG ಗ್ಯಾಸ್ ತುಂಬಿಸುವ ಮೂಲಕ ಚಾಲನೆ ನೀಡಿದರು. ಐಡಿಯಲ್ ಫ್ಯೂಯೆಲ್ಸ್ ನ ಹನೀಫ್ ಟಿ.ಎಚ್ ಎಂ ಎ CNG ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಯನ್ , ಮಹಮ್ಮದ್ ಟೋಪ್ಕೊ ಆಸೀಫ್ ಕೂಟತ್ತಾನ, ಅಝೀಝ್ ಸನ, ವಿ.ಎಚ್ ಅಶ್ರಫ್, ಶಾಕೀರ್ ಅಳಕೆಮಜಲು,ಅಬ್ಬಾಸ್ ಟಿಎಚ್ ಎಂಎ, ಅನ್ವರ್ ಟಿಎಚ್‌ಎಂಎ, ಸುನೀಲ್ ರಾಜ್ ವಿಟ್ಲ ,ಉಬೈದ್ ವಿಟ್ಲ ಬಝಾರ್, ಖಲಂದರ್ ಪರ್ತಿಪ್ಪಾಡಿ, ಜಾಫರ್ ಖಾನ್, ಅಬೂಬಕರ್ ಅನಿಲಕಟ್ಟೆ, ಸೀತಾರಾಮ್ ಜಿ ಶೆಟ್ಟಿ , ನಿತಿನ್ ಕಲ್ಲಡ್ಕ , ಸಚಿನ್ ಕಲ್ಲಡ್ಕ , ಸಂದೇಶ್ ಕುಮಾರ್ ,ಗೈಲ್ ಗ್ಯಾಸ್ ನ ಅಧಿಕಾರಿಗಳಾದ ಅಬೂ ನಿಹಾದ್,ಜೆಸ್ವಿನ್ ಜಾರ್ಜ್
ಮೋಹಿತ್ ಎಂ ಸುವರ್ಣ ಮೊದಲಾದವರು ಭಾಗವಹಿಸಿದ್ದರು.
ವಿಟ್ಲ ಸುತ್ತಮುತ್ತಲಿನ ಕಾರು , ಆಟೋ ಚಾಲಕರ ಸಹಿತ ಹಲವು ವಾಹನ ಮಾಲಕರು ತಮ್ಮ ವಾಹನಕ್ಕೆ CNG ಅನಿಲಕ್ಕಾಗಿ ದೂರದ ಉಪ್ಪಿನಂಗಡಿ,ಪುತ್ತೂರು,ಮುಡಿಪು ಮೊದಲಾದ ಕಡೆಗೆ ಹೋಗುವ ಅನಿವಾರ್ಯತೆ ಎದುರಾಗಿತ್ತು.
ಇದರಿಂದ CNG ವಾಹನ ಮಾಲಕರಿಗೆ ಆಗುತಿರುವ ತೊಂದರೆ ಮನಗಂಡು CNG ಸೌಲಭ್ಯ ಆರಂಭಿಸಲಾಗಿದ್ದು ಉತ್ತಮ ಗುಣಮಟ್ಟದ CNG ಗ್ಯಾಸ್ ದೊರೆಯಲಿದೆ.
ಬೂಸ್ಟರ್ ಕಂಪ್ರೆಸರ್ ಸೌಲಭ್ಯವಿರುದರಿಂದ ವಿಟ್ಲ ಪ್ರದೇಶದ CNG ಗ್ರಾಹಕರು ದೂರದ ಪ್ರದೇಶಕ್ಕೆ ತೆರಳಿ ಇಂಧನ ತುಂಬಿಸುವುದು ತಪ್ಪಿದಂತಾಗಿದೆ.