ವಿಟ್ಲ: ಬ್ರೈಟ್ ಆಡಿಟೋರಿಯಂ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಉದ್ಘಾಟನೆ: ಅದ್ಧೂರಿ ಸಮಾರಂಭಕ್ಕೆ ಹರಿದು ಬಂದ ಜನಸಾಗರ
ವಿಟ್ಲ: ಮದುವೆ ಸಭಾಂಗಣ, ಕಾನ್ಫರೆನ್ಸ್ ಹಾಲ್, ಕಾರ್ಪೋರೆಟ್ ಇವೆಂಟ್ ಗಳಿಗಾಗಿ ಒಳಗೊಂಡಿರುವ ವ್ಯವಸ್ಥಿತ ಹಾಲ್ ಬ್ರೈಟ್ ಆಡಿಟೋರಿಯಂ ವಿಟ್ಲದಲ್ಲಿ ಗುರುವಾರ ಉದ್ಘಾಟನೆಗೊಂಡಿತು.
ಸಯ್ಯದ್ ಇಸ್ಮಾಯಿಲ್ ತಂಙಲ್ ಉಜಿರೆ ಉದ್ಘಾಟಿಸಿದರು. ಸಯ್ಯದ್ ಸಾಬಿಕಲಿ ಶಿಹಾಬ್ ತಂಙಲ್ ಪಾಣಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸಯ್ಯದ್ ಮುಸ್ಅಬ್ ತಂಙಲ್ ಎಟ್ಟಿಕುಲಂ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ (ಖಾಝಿ ಉಡುಪಿ ಮತ್ತು ಚಿಕ್ಕ ಮಂಗಳೂರು), ಸಯ್ಯದ್ ಮುಖ್ತಾರ್ ತಂಙಲ್ ಕುಂಬೋಲ್, ಶಿಯಾಬುದ್ದೀನ್ ತಂಙಳ್ ಮದಕ, ಶಿಯಾಬುದ್ದೀನ್ ಮಸ್ ಹೂರ್ ತಂಙಳ್ ತಲೆಕ್ಕಿ, ಸಯ್ಯದ್ ಮಿಸ್ ಅಬ್ ತಂಙಳ್ ಎಟ್ಟಿಕುಳಂ, ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಎಸ್ ಬಿ ದಾರಿಮಿ ಉಪ್ಪಿನಂಗಡಿ, ರೆ|ಫಾ| ಐವನ್ ಮೈಕಲ್ ರೋಡ್ರಿಗಸ್ ( ಧರ್ಮಗುರು, ತ್ವಾಹ ಬಾಪಾಕ್ಕಿ ತಂಙಳ್ ಕುಂಬೋಳ್, ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ವಿಟ್ಲ ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ, ಶರೀಫ್ ಸಖಾಫಿ ಉಕ್ಕುಡ ಮುದರ್ರಿಸ್ ಶುಭ ಹಾರೈಸಿದರು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ಇದರ ಅಧ್ಯಕ್ಷ ರಶೀದ್ ವಿಟ್ಲ, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ವಿಟ್ಲ ವಾಣಿಜ್ಯ ಸಂಘದ ಅಧ್ಯಕ್ಷ ಬಾಬು ಕೆ.ವಿ , ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಶಾಕಿರ್ ಅಳಕೆಮಜಲು, ಶಾಕೀರ್ ಹಾಜಿ ಇಶಾಮ್ ಮಂಗಳೂರು, ಶೇಕ್ ಬಾವಾ ಮಂಗಳೂರು, ಎನ್ ಸತ್ಯನಾರಾಯಣ ನಾಯಕ್, ಹಮೀದ್ ಹಾಜಿ ಕೊಡಂಗಾಯಿ, ಶಾಕೀರ್ ಹಾಜಿ ವಕೀಲರು ಪುತ್ತೂರು, ಅಳಿಕೆ ಗ್ರಾ.ಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಸಂಯುಕ್ತ ಜಮಾಅತ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ವಿಟ್ಲ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ನೋಟರಿ, ಜತೆ ಕಾರ್ಯದರ್ಶಿ ಅಬೂಬಕ್ಕರ್ ಅನಿಲಕಟ್ಟೆ, ಶರೀಫ್ ಫ್ಯಾನ್ಸಿ ಪಾರ್ಕ್, ಜಯರಾಮ ಬಲ್ಲಾಲ್ ಅರಮನೆ, ಮೊಹಮ್ಮದ್ ಟಿ.ಕೆ ಟಾಪ್ಕೋ ಜುವೆಲ್ಲರಿ, ವಿ.ಎಚ್ ಅಶ್ರಫ್, ಉಬೈದ್ ವಿಟ್ಲ ಬಝಾರ್ ಉಪಸ್ಥಿತರಿದ್ದರು.
ಹಮೀದ್ ಗೋಳ್ತಮಜಲು ನಿರೂಪಿಸಿದರು. ಕೆ.ಕೆ ಇಬ್ರಾಹಿಂ ಬ್ರೈಟ್ ಮತ್ತು ಆರ್ ಕೆ ಅಬ್ದುಲ್ಲ ಹಾಜಿ ಸ್ಟೈಲ್ ಪಾರ್ಕ್ ಅತಿಥಿಗಳನ್ನು ಸ್ವಾಗತಿಸಿದರು.
ಕೆ.ಕೆ ಇಬ್ರಾಹಿಂ ಬ್ರೈಟ್ ಮತ್ತು ಆರ್.ಕೆ ಅಬ್ದುಲ್ಲ ಹಾಜಿ ಸ್ಟೈಲ್ ಪಾರ್ಕ್ ಅವರ ಪಾಲುದಾರಿಯಲ್ಲಿ
ವಿಟ್ಲ ಪೇಟೆಯಲ್ಲಿ ಪ್ರಪ್ರಥಮ ಬಾರಿಗೆ ವಿಶಾಲ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಒಳಗೊಂಡಿರುವ ಬ್ರೈಟ್ ಆಡಿಟೋರಿಯಂ ನಲ್ಲಿ ಮಹಿಳೆಯರಿಗೆ ಮತ್ತು ಮಹಿಳೆಯರಿಗೆ ಏಕಕಾಲದಲ್ಲಿ ಸಾವಿರಾರು ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಮತ್ತು ಆಕರ್ಷಕ ವೇದಿಕೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸೀಟಿನ ಊಟದ ವ್ಯವಸ್ಥೆ, ಸಸ್ಯಹಾರ ಮತ್ತು ಮಾಂಸಾಹಾರ ತಯಾರಿಕೆಗೆ ಪ್ರತ್ಯೇಕ ವಿಶಾಲವಾದ ಅಡುಗೆಮನೆ, ಕಾರ್ಪೊರೇಟ್ ಈವೆಂಟ್, ಸಣ್ಣ ಪುಟ್ಟ ಸಮಾರಂಭಗಳಿಗೆ ಪ್ರತ್ಯೇಕ ಮಿನಿಹಾಲ್, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಬಸ್ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿ ಮುಖ್ಯರಸ್ತೆಗೆ ತಾಗಿಕೊಂಡಿರುವ ಸುಸಜ್ಜಿತ ಸಭಾಂಗಣ ಹೀಗೆ ಇದೆ ಬ್ರೈಟ್ ಆಡಿಟೋರಿಯಂ ನ ವಿಶೇಷತೆಗಳು. 6.45ರಿಂದ 10 ಗಂಟೆ ವರೆಗೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸುಮಾರು 8 ಸಾವಿರಕ್ಕಿಂತಲೂ ಅಧಿಕ ಜನರು ಭಾಗವಹಿಸಿದ್ದರು.