ಕಬಕದಲ್ಲಿ ಎಂ.ಎಚ್ ಟೂರ್ಸ್ ಎನ್ ಟ್ರಾವೆಲ್ಸ್ ಮತ್ತು ಡಿಜಿಟಲ್ ಸೇವಾ ಕೇಂದ್ರ ಶುಭಾರಂಭ
ಕಬಕ: ಎಂ.ಎಚ್ ಟೂರ್ಸ್ ಎನ್ ಟ್ರಾವೆಲ್ಸ್ ಮತ್ತು ಡಿಜಿಟಲ್ ಸೇವಾ ಕೇಂದ್ರ ಕಬಕದಲ್ಲಿ ಡಿಸೆಂಬರ್ 9ರಂದು ಶುಭಾರಂಭಗೊಂಡಿದ್ದು, ಇದರ ನೂತನ ಶಾಖೆಯನ್ನು
ಸಯ್ಯದ್ ಶರಫುದ್ದೀನ್ ತಂಙಲ್ ಸಾಲ್ಮರ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಲಕೆಮಜಲು, ಎಸ್.ಡಿ.ಪಿ.ಐ ಪುತ್ತೂರು ವಿದಾನಸಭಾ ಅಧ್ಯಕ್ಷರಾದ ಸಿದ್ದೀಕ್ ಪುತ್ತೂರು, ಕಾಂಗ್ರೆಸ್ ನಾಯಕರು ಮತ್ತು ಕಬಕ ಗ್ರಾಮ ಪಂಚಾಯಿತಿ ಸದಸ್ಯರಾದ ಶಾಬಚ್ಚ, ಕಲ್ಲೇಗ ಜುಮಾ ಮಸೀದಿ ಅಧ್ಯಕ್ಷರಾದ ಮುಹಮ್ಮದ್ ಹಾಜಿ, ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷರಾದ ಅಶ್ರಫ್ ಹಾಜಿ ಕಲ್ಲೇಗ, ಅಲ್-ಶಿಫಾ ರಿಲೀಫ್ ಫೌಂಡೇಷನ್ ಮುರ ಇದರ ಅಧ್ಯಕ್ಷರಾದ ಕರೀಂ ಬೀಟಿಗೆ, ಅಲ್ ಅಮೀನ್ ಯಂಗ್ಮೆನ್ಸ್ ಕಲ್ಲೇಗ ಇದರ ಅಧ್ಯಕ್ಷರಾದ ರಶೀದ್ ಹಾಜಿ ಶೈನ್, ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕಾರ್ಯದರ್ಶಿ ಉಸ್ಮಾನ್ ಎ.ಕೆ, ಉದ್ಯಮಿ ಮುಹಮ್ಮದ್ ಕಬಕಾರ್ಸ್, ಅಡ್ವಕೇಟ್ ರಹಿಮಾನ್ ಪುತ್ತೂರು, ಸ್ಪೋರ್ಟ್ ಪ್ಲಾಝ ಕಬಕ ಇದರ ಮಾಲಕರಾದ ಅನ್ವರ್ ಮುಂತಾದವರು ಆಗಮಿಸಿ ಶುಭಹಾರೈಸಿದರು.